ಮಂಗಳೂರು: ಈಜಲು ಹೋಗಿದ್ದ 6 ಮಂದಿ ಯುವಕರ ಪೈಕಿ ಇಬ್ಬರು ನೀರುಪಾಲಾದ ಘಟನೆ ಭಾನುವಾರ ಸಂಜೆ ಅಳಪೆ ಪಡ್ಡು ಬಳಿ ನಡೆದಿದೆ. ನಗರದ ಅಳಪೆ ಸ್ಥಳೀಯ ನಿವಾಸಿಗಳಾದ ವರುಣ್ (26) ಮತ್ತು ವೀಕ್ಷಿತ್ (26) ನೀರುಪಾಲಾದವರು ಎಂದು ತಿಳಿದುಬಂದಿದೆ. ಅಳಪೆಯ ಪಡ್ಡು ಬಳಿ ಇರುವ ನೀರು ತುಂಬಿರುವ ಕೆರೆಯಂತಿರುವ ಹೊಂಡದಲ್ಲಿ ವರುಣ್, ವೀಕ್ಷಿತ್ ಸೇರಿದಂತೆ ಆರು ಮಂದಿ ಯುವಕರು ತೆರಳಿದ್ದರು. ಇವರೆಲ್ಲ ನೀರಿಗಿಳಿದಿದ್ದರು. ಈ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಅವರು ನೀರುಪಾಲಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈಗಾಗಲೇ ಓರ್ವನ ಮೃತದೇಹ ಸಿಕ್ಕಿದ್ದು, ಇನ್ನೊಬ್ಬನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯ ನಡೆಸುತ್ತಿದೆ.