main logo

ಇಸ್ರೇಲ್‌ ನಿಂದ ಭಾರತಕ್ಕೆ ಮರಳಿದ ದಕ್ಷಿಣ ಕನ್ನಡ ಮೂಲದ ಇಬ್ಬರು

ಇಸ್ರೇಲ್‌ ನಿಂದ ಭಾರತಕ್ಕೆ ಮರಳಿದ ದಕ್ಷಿಣ ಕನ್ನಡ ಮೂಲದ ಇಬ್ಬರು

ಮಂಗಳೂರು: ಯುದ್ಧಗ್ರಸ್ತ ಇಸ್ರೇಲ್‌ನಿಂದ ಆಪರೇಷನ್‌ ಅಜಯ್‌ ಅಡಿಯಲ್ಲಿ ಮೊದಲ ವಿಮಾನ ಶುಕ್ರವಾರ ದಿಲ್ಲಿಗೆ ಬಂದಿದ್ದು, ಅದರಲ್ಲಿ ಇಬ್ಬರು ದಕ್ಷಿಣ ಕನ್ನಡ ಮೂಲದವರು ಇರುವ ಬಗ್ಗೆ ಮಾಹಿತಿ ಲಭಿಸಿದೆ. ಇಸ್ರೇಲ್‌ನಲ್ಲಿರುವ ಹೆಚ್ಚಿನ ಮಂದಿ ಉದ್ಯೋಗಸ್ಥರಾಗಿದ್ದು, ಅವರು ಭಾರತಕ್ಕೆ ಮರಳುವ ಸಾಧ್ಯತೆ ಕಡಿಮೆ. ಬದಲಿಗೆ ಪ್ರವಾಸಿಗಳಾಗಿ ಹೋದವರು, ವಿದ್ಯಾರ್ಥಿಗಳು, ಉನ್ನತ ಮಟ್ಟದ ಉದ್ಯೋಗದಲ್ಲಿರುವವರು ಮಾತ್ರವೇ ಮರಳುವಂತೆ ಕಾಣುತ್ತಿದೆ. ಲಭ್ಯ ಮಾಹಿತಿಯಂತೆ ಐವರು ಕನ್ನಡಿಗರು ಮೊದಲ ವಿಮಾನದಲ್ಲಿ ಏರ್‌ಲಿಫ್ಟ್ ಆಗಿದ್ದು, ಅದರಲ್ಲಿ ಮಂಗಳೂರಿನ ಜಯೇಶ್‌ ಹಾಗೂ ಅಶ್ವಿ‌ನಿ ಎಂಬವರು ತಾಯ್ನಾಡಿಗೆ ಮರಳಿದ್ದಾರೆ. ಇಸ್ರೇಲ್‌ನ ಅರಿಯಲ್‌ ಎಂಬಲ್ಲಿ ಸಂಶೋಧಕರಾಗಿದ್ದ ಅವರು ಮರಳಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಂಗಳೂರಿಗೆ ಮರಳುವ ಬದಲು ಇವರಿಬ್ಬರೂ ದಿಲ್ಲಿಯಿಂದ ಮುಂಬಯಿಗೆ ಸಂಬಂಧಿಕರಲ್ಲಿಗೆ ತೆರಳಿರುವುದಾಗಿ ತಿಳಿದುಬಂದಿದೆ. ಜಿಲ್ಲಾಡಳಿತದ ಮೂಲಗಳ ಪ್ರಕಾರ ಜಿಲ್ಲೆಗೆ ಇಸ್ರೇಲ್‌ನಿಂದ ಯಾರೂ ಮರಳಿರುವ ಮಾಹಿತಿ ಇಲ್ಲ.

Related Articles

Leave a Reply

Your email address will not be published. Required fields are marked *

error: Content is protected !!