main logo

ತುಂಬೆ ಡ್ಯಾಂ: 2 ಗಂಟೆಗಳ ಕಾಲ ನೀರಿನಲ್ಲಿ ಈಜಾಡಿ ಜೀವ ಉಳಿಸಿಕೊಂಡ ಸಾಹಸಿ ಯುವಕ

ತುಂಬೆ ಡ್ಯಾಂ: 2 ಗಂಟೆಗಳ ಕಾಲ ನೀರಿನಲ್ಲಿ ಈಜಾಡಿ ಜೀವ ಉಳಿಸಿಕೊಂಡ ಸಾಹಸಿ ಯುವಕ

ಬಂಟ್ವಾಳ: ತುಂಬೆ ಡ್ಯಾಂ ಬಳಿ ಯುವಕನೋರ್ವ ಮೀನಿಗೆ ಗಾಳ ಹಾಕುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದಿದ್ದು, ಕೊನೆಗೂ ಜೀವ ಸಹಿತ ಪಾರಾಗಿದ್ದಾರೆ. ಅವರು ಡ್ಯಾಂನಿಂದ ಹೊರಕ್ಕೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಸಿಲುಕಿ ಸುಮಾರು 2 ತಾಸುಗಳ ಕಾಲ ಈಜಾಡಿ ಕೊನೆಗೆ ಡ್ಯಾಂ ಸಿಬಂದಿ ಹಾಗೂ ಬಂಟ್ವಾಳ ಅಗ್ನಿಶಾಮಕ ದಳದವರ ನೆರವಿನಿಂದ ಮೇಲಕ್ಕೆ ಬಂದಿರುವ ಘಟನೆ ಅ. 2ರಂದು ನಡೆದಿದೆ.

ಯುವಕನನ್ನು ಬೋಳಂತೂರು ಭಾಗದ ಇರ್ಷಾದ್‌ ಎಂದು ಗುರುತಿಸ ಲಾಗಿದೆ. ಡ್ಯಾಂನ 30 ಗೇಟ್‌ಗಳ ಪೈಕಿ 5 ಗೇಟ್‌ಗಳಿಂದ ನೀರು ಹೊರಕ್ಕೆ ಹೋಗುತ್ತಿದ್ದು, ಹೀಗಾಗಿ ನೀರಿನ ರಭಸವೂ ಹೆಚ್ಚಿತ್ತು ಎನ್ನಲಾಗಿದೆ.
ಬಿದ್ದಿರುವ ಯುವಕನಿಗೆ ಈಜು ಬರುತ್ತಿದ್ದು, ಆದರೆ ನೀರಿನ ರಭಸದಿಂದ ಮೇಲಕ್ಕೆ ಬರಲು ಸಾಧ್ಯವಾಗಿರಲಿಲ್ಲ. ರಾತ್ರಿ ಸುಮಾರು 8 ಗಂಟೆಗೆ ನೀರಿಗೆ ಬಿದ್ದಿರುವ ಆತ 2 ಗಂಟೆಗಳ ಕಾಲ ಈಜಿ ಜೀವ ಉಳಿಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಡ್ಯಾಂ ಸಿಬಂದಿಗೆ ಎಲ್ಲಿಂದಲೋ ಬೊಬ್ಬೆ ಕೇಳಿದ್ದು, ಹೋಗಿ ನೋಡಿದಾಗ ವ್ಯಕ್ತಿಯೋರ್ವ ನೀರಿನಲ್ಲಿ ಒದ್ದಾಡುತ್ತಿರುವುದು ಕಂಡು ಬಂತು.

ಕೂಡಲೇ ಡ್ಯಾಂ ಸಿಬಂದಿ ಅಗ್ನಿಶಾಮಕ ದಳ, ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಎಲ್ಲರೂ ಸೇರಿ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

Related Articles

Leave a Reply

Your email address will not be published. Required fields are marked *

error: Content is protected !!