ಉಳ್ಳಾಲ: ಉಳ್ಳಾಲ ತಾಲೂಕಿನ ಬೀರಿ ಕೋಟೆಕಾರು ಪ್ರದೇಶದಲ್ಲಿ ಗಣೇಶೋತ್ಸವದ ಶೋಭಾಯಾತ್ರೆ ಅದ್ಧೂರಿಯಾಗಿ ನಡೆದಿದೆ.ಈ ವೇಳೆ ವಿಭಿನ್ನ ಮತ್ತು ವಿಶೇಷ ರೀತಿಯ ವಿವಿಧ ಟ್ಯಾಬ್ಲೋಗಳು ಪ್ರದರ್ಶನಗೊಳ್ಳುತ್ತಿತ್ತು.ಇಷ್ಟು ಟ್ಯಾಬ್ಲೋಗಳ ಜೊತೆ ಗುಳಿಗ ದೈವದ ವೇಷವನ್ನು ಧರಿಸಿ ಓರ್ವ ರಸ್ತೆಯಲ್ಲಿ ನೃತ್ಯ ಮಾಡಿದ್ದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಿ ಆಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ
‘ಕಾಂತಾರ’ ಸಿನಿಮಾ ಬಂದ ನಂತರ ಈ ಹುಚ್ಚುತನ ಜಾಸ್ತಿಯಾಗಿದೆ.ದೈವಗಳಿಗೆ ಅಪಮಾನ ಮಾಡುವಂತ ಸ್ಥಿತಿಗೆ ಬಂದು ಬಿಟ್ಟಿದೆ ಹಾಗೂ ಬೇರೆ ಜೆಲ್ಲೆಯಲ್ಲಿ ಹಾಗೂ ಬೇರೆ ರಾಜ್ಯದಲ್ಲಿ ಈ ಪ್ರಕ್ರಿಯೆ ಶುರುವಾಗಿದೆ
ಅದರಲ್ಲೂ ನಮ್ಮ ದ.ಕ ಜಿಲ್ಲೆಯಲ್ಲೇ ಈ ರೀತಿಯಾಗಿ ಅವಮಾನ ಮಾಡಿದರೆ ಯಾವ ಸಂದೇಶ ಹೋಗುತ್ತೆ ಅನ್ನೋದನ್ನ ಯೋಚನೆ ಮಾಡಬೇಕಾಗಿದೆ ಎಂದು ತುಳು ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಕಾರ್ಯಕ್ರಮ ಆಯೋಜಕರು ಇದನ್ನು ತಡೆಯಬಹುದಿತ್ತಲ್ಲವೇ? ಯಾಕೆ ಅವಕಾಶ ಕೊಟ್ಟಿದ್ದು? ಎಂದು ಕಾರ್ಯಕ್ರಮ ಸಂಘಟಕರ ವಿರುದ್ಧ ಆಕ್ರೋಶಗಳು ಕೇಳಿ ಬರುತ್ತಿದೆ.