Site icon newsroomkannada.com

ಕೊಣಾಜೆ: ಪರಿಸರ ದಿನ ಪ್ರಯುಕ್ತ ಮುಕ್ತಿಭೂಮಿಯಲ್ಲಿ ಗಿಡ ನೆಡುವ ಕಾರ್ಯಕ್ರಮ

ಉಳ್ಳಾಲ‌: ಗಿಡ ನೆಡುವುದು ಪ್ರಕೃತಿ ಮಾತೆಗೆ ಮಾಡುವ ದೊಡ್ಡ ಪೂಜೆ. ಪ್ರಕೃತಿಯನ್ನು ನಾವು ರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಒಂದು ದಿಡ ನೆಟ್ಟರೂ ಅದನ್ನು ರಕ್ಷಿಸೋಣ, ಪ್ರಕೃತಿ ಬಗ್ಗೆ ನಿಗಾ ನಿರ್ಲಕ್ಷ್ಯ ತಾಳುವುದು ನಮ್ಮ ದಡ್ಡತನ ಎಂದು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಅಭಿಪ್ರಾಯಪಟ್ಟರು.
ಕೊಣಾಜೆ ಮಂಗಳಗಂಗೋತ್ರಿ ಜೆಸಿಐ ವತಿಯಿಂದ ಕೊಣಾಜೆ ಗ್ರಾಮ ಪಂಚಾಯಿತಿ, ಗಂಗೋತ್ರಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ‌.ಟ್ರಸ್ಟ್ ಪ್ರಗತಿ ಬಂಧು ಸ್ವ-ಸಹಾಯ ಸಂಘ, ಮಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಸಹಕಾರದಲ್ಲಿ ಬುಧವಾರ ಕೊಣಾಜೆ ಲಯನ್ಸ್ ಮುಕ್ತಿಭೂಮಿಯಲ್ಲಿ ವಿಶ್ವ ಪರಿಸರ ದಿನ ಪ್ರಯುಕ್ತ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೆಸಿಐ ಮಾಜಿ ಅಧ್ಯಕ್ಷ ಡಾ.ನರಸಿಂಹಯ್ಯ ಎನ್. ಮಾತನಾಡಿ, ಈ ವರ್ಷ ಬೇಸಿಗೆ ಕಾಲದಲ್ಲಿ ಉಷ್ಣಾಂಶದಲ್ಲಿ ಭಾರತ ದಾಖಲೆ ಬರೆದಿದೆ. ಮರಗಳನ್ನು ಕುಡಿಯುವುದು, ನದಿಗಳಿಗೆ ಕೈಗಾರಿಕಾ ಮಲಿನ ಬಿಡುವುದು, ನೆಲಕ್ಕೆ ಇಂಟರ್ ಲಾಕ್ ಅಳವಡಿಸುವುದು ಪ್ರಕೃತಿಗೆ ಭೂಷಣವಲ್ಲ ಪ್ರಕೃತಿ ಧರ್ಮ ಎಲ್ಲ ಧರ್ಮಗಳಿಗೆ ಗುರು  ಎಂದರು.
ಜೆಸಿಐ ಮಂಗಳಗಂಗೋತ್ರಿ ಅಧ್ಯಕ್ಷೆ ಕವಿತಾ ಮಾತನಾಡಿ, ಪರಿಸರ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರ ಪ್ರಕ್ರಿಯೆ ಆಗಿರಬೇಕು. ಪ್ರತಿಯೊಬ್ಬರೂ ಮನೆಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ಕೊಣಾಜೆ ಗ್ರಾಮ ಪಂಚಾಯಿತಿ ಸದಸ್ಯೆ ವೇದಾವತಿ ಗಟ್ಟಿ, ಸೇವಾ ಪ್ರತಿನಿಧಿಗಳಾದ ಸರಿತಾ, ಸವಿತಾ, ಚಿತ್ತರಂಜನ್, ಲೀಲಾ, ವಿಪತ್ತು ನಿರ್ವಹಣಾ ಘಟಕದ ಕಾರ್ಯದರ್ಶಿ ಸುರೇಶ್, ಅನಿತಾ ಕೋಟ್ಯಾನ್, ಗಣೇಶ್ ಗಟ್ಟಿ, ಹರಿಪ್ರಸಾದ್, ಮಮತಾ, ಶಕೀಲಾ, ಸರಿತಾ, ಕವಿತಾ, ಮಿನಿ ಟೀಚರ್, ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಸುಚಿತ್ರ, ಮಂಗಳೂರು ವಿವಿ ಎಂಎಸ್ ಡಬ್ಲ್ಯೂ ವಿದ್ಯಾರ್ಥಿಗಳಾದ ಪವಿತ್ರಾ,   ಮೊದಲಾದವರು ಉಪಸ್ಥಿತರಿದ್ದರು.
ವಿಪತ್ತು ನಿರ್ವಹಣಾ ಘಟಕಾಧ್ಯಕ್ಷೆ ಪೂರ್ಣಿಮಾ ಶೆಟ್ಟಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ನೌಷಾದ್ ಕೊಣಾಜೆ ವಂದಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೇಲ್ವಿಚಾರಕ ಮಾಧವ ಕಾರ್ಯಕ್ರಮ ನಿರೂಪಿಸಿದರು.
Exit mobile version