main logo

ಪಾಕಿಸ್ತಾನದ ಬೌದ್ಧ ಮಂದಿರದಲ್ಲಿ ನಿಧಿ ಪತ್ತೆ

ಪಾಕಿಸ್ತಾನದ ಬೌದ್ಧ ಮಂದಿರದಲ್ಲಿ ನಿಧಿ ಪತ್ತೆ

ಪಾಕಿಸ್ತಾನದಲ್ಲಿ ನಿಧಿ ಪತ್ತೆ ಯಾಗಿದ್ದು. ಬರೋಬ್ಬರಿ 2,000 ವರ್ಷಗಳಷ್ಟು ಹಳೆಯದಾದ ನಾಣ್ಯಗಳನ್ನು ಒಳಗೊಂಡಿರುವ ಅತ್ಯಂತ ಅಪರೂಪದ ನಿಧಿ ಇಲ್ಲಿ ಕಂಡುಬಂದಿದೆ. ಈ ನಿಧಿಯಲ್ಲಿನ ಅನೇಕ ನಾಣ್ಯಗಳು ತಾಮ್ರದಿಂದ ಮಾಡಲ್ಪಟ್ಟಿದೆ. ಇದು ಬೌದ್ಧ ದೇವಾಲಯಗಳ ಗೋರಿಗಳಲ್ಲಿ ಕಂಡುಬಂದಿದೆ. ಲೈವ್‌ ಸೈನ್ಸ್ ಈ ನಿಧಿಗೆ ಸಂಬಂಧಿಸಿದ ವರದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಮಧ್ಯ ಆಗ್ನೇಯ ಪಾಕಿಸ್ತಾನದಲ್ಲಿ ಕ್ರಿ.ಪೂ. 2600 ರ ಮೊಹೆಂಜೋದಾರೋ ಕಾಲದ ಬೃಹತ್ ರಚನೆಗಳಲ್ಲಿ ಇದು ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಇದು ಮೊಹೆಂಜೋದಾರೋ ಪತನದ ನಂತರದ, ಸುಮಾರು 1600 ವರ್ಷಗಳಷ್ಟು ಹಳೆಯದು. ಅದರ ನಂತರ ಬಂಡೆಗಳ ಮೇಲೆ ಸ್ತೂಪವನ್ನು ನಿರ್ಮಿಸಲಾಯಿತು ಎಂದು ಈನಾಣ್ಯಗಳನ್ನು ಪತ್ತೆ ಮಾಡಿದ ತಂಡದಲ್ಲಿದ್ದ ಶೇಖ್ ಜಾವೇದ್ ಹೇಳಿದರು.

ಪತ್ತೆಯಾಗಿರುವ ನಾಣ್ಯಗಳ ಬಣ್ಣವು ಸಂಪೂರ್ಣವಾಗಿ ಹಸಿರು ಬಣ್ಣದ್ದಾಗಿದೆ. ಏಕೆಂದರೆ ತಾಮ್ರವನ್ನು ಗಾಳಿಗೆ ತಾಗಿಸಿದಾಗ ಅದರ ಬಣ್ಣ ಬದಲಾಗುತ್ತದೆ. ಶತಮಾನಗಳಿಂದಲೂ ಈ ನಾಣ್ಯಗಳು ಪೆಟ್ಟಿಗೆಯಲ್ಲಿ ಉಳಿದುಕೊಂಡಿದ್ದರಿಂದ ಅವು ದೊಡ್ಡ ಗುಂಡು ಕಲ್ಲಾಗಿ ಮಾರ್ಪಟ್ಟವು. ಈ ನಿಧಿಯು ಸುಮಾರು 5.5 ಕಿಲೋಗಳಷ್ಟು ತೂಗುತ್ತದೆ ಎಂದು ಪುರಾತತ್ತ್ವಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!