main logo

‘ಭೂತ ಕೋಲ’ ಬಳಸಿ ವ್ಯಾಪಾರಕ್ಕಿಳಿದ ಟ್ರಾವೆಲ್‌ ಏಜನ್ಸಿ: ನಮ್ಮ ಶಕ್ತಿ ಏನೆಂದು ತೋರಿಸ್ತೇವೆ ಎಂದ ಕರಾವಳಿಗರು

‘ಭೂತ ಕೋಲ’ ಬಳಸಿ ವ್ಯಾಪಾರಕ್ಕಿಳಿದ ಟ್ರಾವೆಲ್‌ ಏಜನ್ಸಿ: ನಮ್ಮ ಶಕ್ತಿ ಏನೆಂದು ತೋರಿಸ್ತೇವೆ ಎಂದ ಕರಾವಳಿಗರು

ಮಂಗಳೂರು: ಕಾಂತಾರ ಚಿತ್ರ ತುಳುನಾಡಿನ ದೈವ ದೇವರ ಶಕ್ತಿ ಏನು ಎಂಬುದನ್ನು ಜಗತ್ತಿಗೆ ತೋರಿಸಿದ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಚಿತ್ರ ಬಂದ ಬಳಕ ಟ್ರಾವೆಲ್​ ಏಜೆನ್ಸಿ ಒಂದು ಕಾಂತಾರ ತೋರಿಸಿ ಹೊಸ ವ್ಯಾಪಾರಕ್ಕಿಳಿದಿದೆ.

ಕಾಂತಾರ ಸಿನಿಮಾ ಬಳಿಕ ಭೂತಕೋಲ ಕ್ರೇಜ್ ಹೆಚ್ಚಾಗಿದೆ. ಕಾಂತಾರ -1 ಟೀಸರ್ ರಿಲೀಸ್​ ಬೆನ್ನಲ್ಲೆ ಕರಾವಳಿಯಲ್ಲಿ ಹೊಸ ವಿವಾದ ಉಂಟಾಗಿದೆ.ಇಷ್ಟು ದಿನ ಕರಾವಳಿಗರನ್ನಷ್ಟೇ ಸೆಳೆಯುತ್ತಿದ್ದ ಭೂತಕೋಲ ಕಾಂತಾರ ಬಳಿಕ ಭೂತಕೋಲ, ದೈವದ ಬಗ್ಗೆ ಹೆಚ್ಚಿದ ಜನರ ಆಸಕ್ತಿಯನ್ನೇ ಬಂಡವಾಳ ಮಾಡಿಕೊಂಡಿದೆ ಟ್ರಾವೆಲ್ ಏಜೆನ್ಸಿಗಳು.

ಟ್ರಾವೆಲ್​ ಏಜೆನ್ಸಿಗಳಿಂದ ಹೊಸ ಟೂರ್ ಪ್ಯಾಕೇಜ್​ ಆಫರ್ ನೀಡಲಾಗಿದೆ.ದೈವಕೋಲದ ವೀಕ್ಷಣೆಗೆ ಟೂರ್​ ಪ್ಯಾಕೇಜ್​ ಆಫರ್‘ಭೂತ ಕೋಲ’ A night with ancient spirits ಹೆಸರಿನಲ್ಲಿ ಆಫರ್ ನೀಡುವ ಮೂಲಕ ತುಳುನಾಡಿನ ನಂಬಿಕೆಯ ದೈವಾರಾಧನೆ ಹೆಸರಲ್ಲಿ ಹೊಸ ದಂಧೆ ಹುಟ್ಟಿಕೊಂಡಿದೆ

ಈವೆಂಟ್​ ರೀತಿ ದೈವನರ್ತನ ವೀಕ್ಷಣೆಗೆ ಟಿಕೆಟ್​ ದರ ಫಿಕ್ಸ್ ಮಾಡಲಾಗಿದೆ. travelbuddy ಎಂಬ ಏಜೆನ್ಸಿಯಿಂದ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ನ್ನು ಬಿಟ್ಟಿದೆ. ಟ್ರಾವೆಲ್​ ಏಜೆನ್ಸಿ ಪೋಸ್ಟರ್ ವಿರುದ್ಧ ಕರಾವಳಿ ಮಂದಿ ಆಕ್ರೋಶ ಹೊರಕಾಕಿದ್ದಾರೆ.

ಕರಾವಳಿಯ ಕಲೆ, ಸಂಸ್ಕೃತಿ ವೀಕ್ಷಣೆಗೆ ಟ್ರಾವೆಲ್​ ಪ್ಯಾಕೇಜ್​ ಪ್ರಕಟ ಮಾಡಿದೆ. ಅದರಲ್ಲಿ ದೈವಾರಾಧನೆ ಜತೆ ಪ್ರವಾಸಿತಾಣಗಳನ್ನು ತೋರಿಸುವುದಾಗಿ ಪೋಸ್ಟ್ ಹಾಕಲಾಗಿದ್ದು ,ಪ್ರತಿ ವ್ಯಕ್ತಿಗೆ 2,899ರೂ. ಟಿಕೆಟ್​ ದರ ವಿಧಿಸಿದೆ.

2,899ರೂ. ಕೊಟ್ಟರೆ ಕಂಬಳ, ಭೂತಕೋಲ, ಟ್ರೆಕ್ಕಿಂಗ್​ ಸೌಲಭ್ಯ ನೀಡುವುದಾಗಿ ಪೋಸ್ಟರ್ ಮಾಡಿದ್ದಾರೆ . ಇದರ ವಿರುದ್ದ ತುಳುನಾಡಿನ ದೈವಾರಾಧಕರು ಸಿಡಿದು ಇಂಥ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!