ಮಂಗಳೂರು: ಬೆಂಗಳೂರಿನಿಂದ ಉಡುಪಿ ಕಡೆಗೆ ತರಕಾರಿ ಸಾಗಿಸುತ್ತಿದ್ದ ಲಾರಿ ಚಾಲಕ ಶನಿವಾರ ರಾತ್ರಿ 1-30 ಕ್ಕೆ ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ಚಾಲಕ ತನ್ನ ಲಾರಿಯನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಹೋಗಿ ಸುರತ್ಕಲ್ ಎನ್.ಐ.ಟಿ.ಕೆ ಸಮೀಪದಲ್ಲಿರುವ ಹಳೆಯ ಟೋಲ್ ಗೇಟ್ ನ ವಿಭಜಕದ ಮೇಲೇರಿ ಟೋಲ್ ಬೂತ್ ಗೆ ಡಿಕ್ಕಿಯಾಗಿ ಲಾರಿ ಪಲ್ಟಿಯಾಗಿದೆ. ಈ ಘಟನೆಯಿಂದ ಚಾಲಕನಿಗೆ ಗುದ್ದಿದ ಗಾಯವಾಗಿದ್ದು ಟೋಲ್ ಗೇಟ್ ನ ಒಂದು ಟೋಲ್ ಬೂತ್ ಹಾಗೂ ಕಬ್ಬಿಣದ ಪಿಲ್ಲರ್ ಸಂಪೂರ್ಣ ಜಖಂಗೊಂಡಿದೆ.