Site icon newsroomkannada.com

ಮೂಗಿಗೆ ದೊಡ್ಡದೊಂದು ಮೂಗುತಿ ಧರಿಸಿದ ರಾಜ್‌ ಬಿ. ಶೆಟ್ಟಿ

ಬೆಂಗಳೂರು: ಪ್ರಸಿದ್ಧ ನಿರ್ದೇಶಕ ರಾಜ್‌ ಬಿ ಶೆಟ್ಟಿ ಇದೀಗ ‘ಟೋಬಿ’ ಮೂಲಕ ಹೊಸ ಕಥೆಯೊಂದಿಗೆ ತೆರೆ ಮೇಲೆ ಬರುತ್ತಿದ್ದಾರೆ. ರಾಜ್ ಬಿ ಶೆಟ್ಟಿ ನಟಿಸಿರುವ ಟೋಬಿ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಮಾರಿಗೆ ದಾರಿ ಮಾಡಿ ಕೊಡಿ ಎಂದು ರಾಜ್ ಬಿ ಶೆಟ್ಟಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ‘ಟೋಬಿ’ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿತ್ತು. ಚಿತ್ರದ ಫಸ್ಟ್ ಲುಕ್ ನಲ್ಲಿ ರಾಜ್‌ ಬಿ ಶೆಟ್ಟಿ ರೊಚ್ಚಿಗೆದ್ದ ಟಗರಿನಂತೆ ಮೂಗಿಗೆ ದೊಡ್ಡದೊಂದು ಮೂಗುತಿ, ರಕ್ತದ ಕಲೆಗಳನ್ನು ಹೊತ್ತು ಬಂದಿದ್ದಾರೆ. ಆಗಸ್ಟ್​ 25ರಂದು ‘ಟೋಬಿ’ ಚಿತ್ರ ತೆರೆ ಕಾಣಲಿದ್ದು ಚಿತ್ರದ ಮೂಲ ಕಥೆ ಟಿ.ಕೆ ದಯಾನಂದ್ ಅವರದ್ದಾಗಿದೆ. ಚಿತ್ರವನ್ನು ಬಾಸಿಲ್​ ನಿರ್ದೇಶಿಸುತ್ತಿದ್ದಾರೆ. ‘ಲೈಟರ್​ ಬುದ್ಧ ಫಿಲ್ಮ್ಸ್’​ನಡಿ ‘ಗರುಡ ಗಮನ ವೃಷಭ ವಾಹನ’ ಚಿತ್ರ ನಿರ್ಮಾಣವಾಗಿತ್ತು. ಅದೇ ಬ್ಯಾನರ್​ನಲ್ಲಿ ರವಿ ರೈ ಕಳಸ ‘ಟೋಬಿ’ಯನ್ನು ನಿರ್ಮಾಣ ಮಾಡುತ್ತಿದ್ದಾರೆ.

Exit mobile version