ಮಂಗಳೂರು: ಆಟಿ ತಿಂಗಳ ವೈವಿಧ್ಯಮಯ ತಿಂಡಿತಿನಸುಗಳ ಪ್ರದರ್ಶನ ಮತ್ತು ಮಾರಾಟ “ತಿಂಡಿ ಹಬ್ಬ -2023” ಆಗಸ್ಟ್ 5 ಮತ್ತು 6 ರಂದು ಮಂಗಳೂರು ಶರವು ದೇವಳ ಸಮೀಪದ ಬಾಳಂಭಟ್ ಹಾಲ್ ನಲ್ಲಿ ಆಯೋಜಿಸಲಾಗಿದೆ.
ನಗರದ ಜನರಿಗೆ ಆಟಿ ತಿಂಗಳ ಆಹಾರ ಸವಿಯಲು ಅವಕಾಶ ಸಿಗುವುದೇ ಅಪರೂಪ. ಈ ಹಿನ್ನೆಲೆಯಲ್ಲಿ ಪೇಟೆ ಜನರಿಗೆ ಆಟಿ ಖಾದ್ಯ ಉಣಬಡಿಸಲು ವಿವಿಧ ಭಾಗಗಳಿಂದ ಬಾಣಸಿಗರನ್ನು, ಖಾದ್ಯ ತಯಾರಿಯಲ್ಲಿ ಪಳಗಿದ ಮಹಿಳೆಯನ್ನು, ಸಂಘಟನೆಗಳನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೆಸು ಪತ್ರೋಡೆ, ತಜಂಕ್ ಪತ್ರೊಡೆ, ಉಂಡ್ಲುಕ, ಉಪ್ಪಡ್ ಪಚ್ಚಿರ್ ವಿಶೇಷ ಖಾದ್ಯ, ಹಲಸಿನ ದೋಸೆ, ಗಟ್ಟಿ, ಪಾಯಸ, ಹಲಸಿನ ಮಂಚೂರಿ, ಆಟಿ ತಿಂಗಳಲ್ಲಿ ದೇಹದ ಆರೋಗ್ಯ ಕ್ಕಾಗಿ ಸೇವಿಸುವ ವಿಶೇಷ ಕಷಾಯ ಗಳು, ಸಿರಿಧಾನ್ಯಗಳದಮಾಡಿದ ಖಾದ್ಯಗಳು ತಿಂಡಿ ಹಬ್ಬದಲ್ಲಿ ಮಾರಾಟಗೊಳ್ಳಲಿದೆ.
ಅಲ್ಲದೆ, ಹಲಸಿನ ಹೋಳಿಗೆ, ಐಸ್ ಕ್ರೀಂ, ತರಕಾರಿ ಗಿಡಗಳ ಮಾರಾಟ, ಉತ್ತರ ಕನ್ನಡ ಜಿಲ್ಲೆಯ ಖಾದ್ಯಗಳು, ಧಾರವಾಡ ಭಾಗದ ವಿಶೇಷ ತಿಂಡಿಗಳು, ವಿವಿಧ ಹಣ್ಣಿನ ಉತ್ಪನ್ನಗಳು, ತರಕಾರಿ ಬೀಜಗಳು ಸೇರಿದಂತೆ 50ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆ, ಸೆಲ್ಫಿ ಸ್ಪರ್ಧೆ, ವೀಡಿಯೊ ಸ್ಪರ್ಧೆ ಆಯೋಜಿಸಲಾಗಿದ್ದು, 24 ಕ್ಯಾರೆಟ್ ನ ಚಿನ್ನದ ನಾಣ್ಯ, ಬೆಳ್ಳಿ ನಾಣ್ಯ, ಸೀರೆ ಹಾಗೂ ಇನ್ನಿತರ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ಉಚಿತ ಎಂದು ಕಾರ್ಯಕ್ರಮ ಸಂಚಾಲಕ ಪ್ರಕೃತಿ ಫುಡ್ಸ್ ಪ್ರಕಾಶ್ ಪ್ರಭು ( 7090330003 )ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಿಂಡಿ ಹಬ್ಬದಲ್ಲಿ ಸೆಲ್ಫಿ / ರೀಲ್ಸ್ ಮಾಡಿ 24 ಕ್ಯಾರೆಟ್ ನ ಚಿನ್ನ, ಬೆಳ್ಳಿ ನಾಣ್ಯ ಗೆಲ್ಲಿ:
ಸ್ಪರ್ಧೆ ವಿವರ:
ವಾಟ್ಸಾಪ್ ಸೆಲ್ಫಿ ಸ್ಪರ್ಧೆ: ಪ್ರವೇಶ ದ್ವಾರದಲ್ಲಿ ಇರಿಸಿದ ಸೆಲ್ಫಿ ಸ್ಟ್ಯಾಂಡ್ ಮುಂದೆ ಸೆಲ್ಫಿ ತೆಗೆದು ವಾಟ್ಸಾಪ್ ಸ್ಟೇಟಸ್ ನಲ್ಲಿ ಅಪ್ಲೋಡ್ ಮಾಡಬೇಕು. ವಾಟ್ಸಾಪ್ ನಲ್ಲಿ ಹೆಚ್ಚು ವ್ಯೂಸ್ ಬಂದ ಸೆಲ್ಫಿಗೆ ಚಿನ್ನದ ನಾಣ್ಯ ಬಹುಮಾನವಿದೆ.
ಫೇಸ್ ಬುಕ್ ರೀಲ್ಸ್ ಸ್ಪರ್ಧೆ: ತಿಂಡಿ ಹಬ್ಬದ ಬಗ್ಗೆ ಪುಟ್ಟ ವಿಡಿಯೋ ರೀಲ್ಸ್ ಮಾಡಿ ಫೇಸ್ ಬುಕ್ ರೀಲ್ಸ್ ವಿಭಾಗದಲ್ಲಿ ಅಪ್ಲೋಡ್ ಮಾಡಬೇಕು. ಹೆಚ್ಚು ಲೈಕ್ಸ್ ಬಂದ ರೀಲ್ಸ್ ಗೆ ಬೆಳ್ಳಿ ನಾಣ್ಯ ಬಹುಮಾನವಿದೆ.
ಸ್ಪರ್ಧಿಗಳಿಗೆ ಸೂಚನೆ: ಆಗಸ್ಟ್ 6ರಂದು ಸಾಯಂಕಾಲ 4 ಗಂಟೆ ವರೆಗಿನ ವ್ಯೂಸ್ ಮಾತ್ರ ಪರಿಗಣಿಸಲಾಗುವುದು. ಆಗಸ್ಟ್ 6 ರಂದು ಸಾಯಂಕಾಲ 5 ಗಂಟೆ ಮೊದಲು ಅಪ್ ಲೋಡ್ ಮಾಡಿದ ಸೆಲ್ಫಿ ಮತ್ತು ವಿಡಿಯೊಗಳ ಸ್ಕ್ರೀನ್ ಶಾಟ್ ನ್ನು * +917090330003 ಈ ಸಂಖ್ಯೆಗೆ ವಾಟ್ಸಾಪ್ ಮಾಡಿ. ಸಾಯಂಕಾಲ 5 ಗಂಟೆ ನಂತರ ಬಂದವುಗಳನ್ನು ಪರಿಗಣಿಸುವುದಿಲ್ಲ. ಆಯೋಜಕರ ತೀರ್ಮಾನ ಅಂತಿಮವಾಗಿರುತ್ತದೆ.