main logo

ಅಡಿಕೆ ಕಳವು ಮಾಡುತ್ತಿದ್ದವರು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದರು: ಈ ವೇಳೆ ತಲವಾರಿನಿಂದ ಬೀಸಿದ ಕಳ್ಳ.. ಮುಂದಾಗಿದ್ದೇನು

ಅಡಿಕೆ ಕಳವು ಮಾಡುತ್ತಿದ್ದವರು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದರು: ಈ ವೇಳೆ ತಲವಾರಿನಿಂದ ಬೀಸಿದ ಕಳ್ಳ.. ಮುಂದಾಗಿದ್ದೇನು

ಪುತ್ತೂರು: ಅಡಿಕೆಗೆ ಒಣಹಾಕಿದ ಸೋಲಾರ್‌ಗೂಡಿನಿಂದ ಕಾರಿಗೆ ಅಡಿಕೆ ತುಂಬುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬ ತಲವಾರನ್ನು ಬೀಸಿರುವ ಘಟನೆ ದ.ಕ.ಜಿಲ್ಲೆಯ ಕಡಬ ತಾಲೂಕಿನ ಸವಣೂರಿನಿಂದ ವರದಿಯಾಗಿದೆ.ಸವಣೂರಿನ ಎಡಪತ್ಯ ಫಾರ್ಮ್ ಒಂದರಿಂದ ಅಡಿಕೆ ಕಳ್ಳತನಕ್ಕೆ ಇಬ್ಬರ ತಂಡ ವಾಹನದಲ್ಲಿ ಬಂದಿದ್ದಾರೆನ್ನುವ ಆರೋಪ ಕೇಳಿ ಬಂದಿದ್ದು,ಅಡಿಕೆ ದೋಚುವ ಸಂದರ್ಭದಲ್ಲಿ ಫಾರ್ಮ್ ಮಾಲಕನ ಪುತ್ರನ ಕೈಗೆ ತಲವಾರು ಬೀಸಿದ್ದಾರೆಂದು ವರದಿಯಾಗಿದೆ.

ಎಡಪತ್ಯ ಫಾರ್ಮ್ ಮಾಲಕ ರಾಮಚಂದ್ರ ಎಡಪತ್ಯ ಅವರ ಪುತ್ರ ನಿಷ್ಕಲ್‌ ರಾಮ್‌ ಎಡಪತ್ಯ ತಲವಾರು ದಾಳಿಗೆ ಒಳಗಾದವರು. ದಾಳಿಯ ವೇಳೆ ಕೈಗೆ ಗಾಯವಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶನಿವಾರ ಬೆಳಗ್ಗಿನ ಜಾವ ಈ ಘಟನೆ ನಡೆದಿದೆ.ನಿಷ್ಕಲ್‌ ಅವರು ಮೈಸೂರಿನಿಂದ ಬರುವ ಸಂದರ್ಭದಲ್ಲಿ ಅಡಿಕೆಗೆ ಒಣಹಾಕಿದ ಸೋಲಾರ್‌ಗೂಡಿನಿಂದ ಕಾರಿಗೆ ಅಡಿಕೆ ತುಂಬುತ್ತಿರುವುದು ಕಂಡು ಬಂದಿದೆ.ಇದೇ ವೇಳೆ ಮನೆಯ ಮಾಲೀಕರು ಇದನ್ನು ಕಳ್ಳರ ಜತೆ ಪ್ರಶ್ನೆ ಮಾಡಿದ್ದಾರೆ.ಈ ವೇಳೆ ಕಳ್ಳರು ಬೆದರಿಕೆ ಹಾಕಿದ್ದೂ ಅಲ್ಲದೇ ತಲವಾರಿನಿಂದ ದಾಳಿ ಮಾಡಿದ್ದು,ಕೈಗೆ ಗಾಯವಾಗಿದೆ. ಈ ವೇಳೆ ಅವರು ಕಿರುಚಿದ್ದರಿಂದ ಮನೆಯವರು ಅಲ್ಲಿಗೆ ಬಂದು ಕಳ್ಳರಲ್ಲಿ ಓರ್ವನನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಶೀರ್‌ ಸಿಕ್ಕಿಬಿದ್ದ ಕಳ್ಳ ಎಂದು ಗುರುತಿಸಲಾಗಿದೆ. ಕಳೆದ ಹಲವು ದಿನಗಳಿಂದ ನಿರಂತರ ಅಡಿಕೆ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿರುವ ಬಶೀರ್‌, ಸುಮಾರು 5 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಅಡಿಕೆಯನ್ನು ಸುಲಿದಿಟ್ಟ ಗೋದಾಮು ಹಾಗೂ ಸೋಲಾರ್‌ ಕೊಠಡಿಯಿಂದ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇನ್ನೋರ್ವ ಕಳ್ಳ ಹಕೀಂನ ಸೂಚನೆಯ ಮೇರೆಗೆ ಇಲ್ಲಿಗೆ ಆಗಮಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವೀಡಿಯೋದಲ್ಲಿ ಕಳ್ಳ ಒಪ್ಪಿಕೊಂಡಿದ್ದಾನೆ. ಇರ್ಷಾದ್‌ ಎಂಬವರಿಗೆ ಸೇರಿದ ಕಾರಿನಲ್ಲಿ ಕಳ್ಳರು ಬಂದಿದ್ದು, ಬಶೀರ್‌ನನ್ನು ಫಾರ್ಮ್ ಮಾಲಕರು ಬೆಳ್ಳಾರೆ ಠಾಣೆಗೆ ಒಪ್ಪಿಸಿದ್ದಾರೆ.ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related Articles

Leave a Reply

Your email address will not be published. Required fields are marked *

error: Content is protected !!