main logo

ಗಣಿ ಅಧಿಕಾರಿ ಕೊಲೆ ಮಾಡಿ ದೂರದೂರಿಗೆ ಓಡಿಹೋಗಿದ್ದ ಆರೋಪಿಯನ್ನು ಸೆರೆಯಾಗಿದ್ದು ಹೀಗೆ

ಗಣಿ ಅಧಿಕಾರಿ ಕೊಲೆ ಮಾಡಿ ದೂರದೂರಿಗೆ ಓಡಿಹೋಗಿದ್ದ ಆರೋಪಿಯನ್ನು ಸೆರೆಯಾಗಿದ್ದು ಹೀಗೆ

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಅಂಶಗಳು ಬೆಳಕಿಗೆ ಬರುತ್ತಿವೆ. ಹಂತಕ ಕಿರಣ್ ಪೊಲೀಸ್​ ವಿಚಾರಣೆ ವೇಳೆ ಒಂದೊಂದೇ ಅಂಶಗಳು ಎಂತವರನ್ನು ದಂಗುಬಡಿಸುತ್ತವೆ. ಕಂಟ್ರಾಕ್ಟ್ ಕೆಲಸದಲ್ಲಿ ಇದ್ದರೂ, ಸರ್ಕಾರಿ ಕೆಲಸ ಎಂದು ಮನೆ ಮಂದಿಗೆಲ್ಲ ಸುಳ್ಳು ಹೇಳಿಕೊಂಡು ಬಂದಿದ್ದ. ಆದ್ರೆ, ಪ್ರತಿಮಾ ಅವರು ಏಕಾಏಕಿ ಕಿರಣ್​ನನ್ನು ಕೆಲಸದಿಂದ ತೆಗೆದಿದ್ದರು. ಇದರಿಂದ ಕಿರಣ್​​ನ ನಿಜವಾದ ಬಂಡವಾಳ ಬಟಾಬಯಲಾಗಿದೆ. ಇದರಿಂದ ಹೆಂಡತಿ ಸಹ ಏಕೆ ಸುಳ್ಳು ಹೇಳಿದ್ದು ಎಂದು ಮುನಿಸಿಕೊಂಡು ಕಿರಣ್​ನನ್ನು ತೊರೆದು ತವರು ಮನೆ ಸೇರಿದ್ದಳು. ಇದರಿಂದ ರೊಚ್ಚಿಗೆದ್ದಿದ್ದ ಕಿರಣ್​, ಶನಿವಾರ (ನವೆಂಬರ್ 04) ಒಂದು ನಿರ್ಧಾರಕ್ಕೆ ಬಂದಿದ್ದ. ಏನಾದರೂ ಮಾಡಿ ಕೆಲಸ ವಾಪಸ್ ತೆಗೆದುಕೊಳ್ಳಬೇಕು. ಇಲ್ಲ ಪ್ರತಿಮಾಳನ್ನ ಮುಗಿಸಬೇಕು ಎಂದು ಡಿಸೈಡ್ ಮಾಡಿದ್ದ.

ಅದರಂತೆ ಕಿರಣ್ ಶನಿವಾರ, ಪ್ರತಿಮಾ ಮನೆಗೆ ತೆರಳಿ ವಾಪಸ್​ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದ. ಆದ್ರೆ, ಇದಕ್ಕೆ ಪ್ರತಿಮಾ ನಿರಾಕರಿಸಿದ್ದರು. ಇದರಿಂದ ರೊಚ್ಚಿಗೆದ್ದ ಕಿರಣ್​, ಮನೆಯ ಕಿಚನ್ ನಲ್ಲಿದ್ದ ಚಾಕು ತೆಗೆದುಕೊಂಡು ಪ್ರತಿಮಾರನ್ನು ಕೊಲೆ ಮಾಡಿದ್ದಾನೆ. ಬಳಿಕ ಆ ಚಾಕುವನ್ನು ಜೆಪಿ ನಗರ ಬಳಿ ಎಸೆದಿದ್ದೇನೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಕೋಣನಕುಂಟೆ ನಿವಾಸಿಯಾಗಿರುವ ಅರೋಪಿ ಕಿರಣ್​ ಕೊಲೆ ಮಾಡಿ ಬಳಿಕ ಇಬ್ಬರು‌ ಸ್ನೇಹಿತರ ಜತೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ. ಕೊಲೆ ಬಗ್ಗೆ ಜೊತೆಗಿದ್ದ ಸ್ನೇಹಿತರಿಗೂ ಯಾವುದೇ ಮಾಹಿತಿ ನೀಡಿರಲಿಲ್ಲ. ಇನ್ನು ಎರಡು ಮೊಬೈಲ್​​ಗಳನ್ನು ಬಳಸುತ್ತಿದ್ದ ಕಿರಣ್, ಒಂದು ಫೋನ್ ಮನೆಯಲ್ಲಿ ಸ್ವಿಚ್ ಆಫ್ ಮಾಡಿಟ್ಟು, ಇನ್ನೊಂದು ಫೋನ್ ತೆಗೆದುಕೊಂಡು ಹೋಗಿದ್ದ. ಆದ್ರೆ, ಅದನ್ನು ಸ್ವಿಚ್ ಆಫ್ ಮಾಡಿದ್ದ. ನಂತರ ಶನಿವಾರ (ಕೊಲೆ ಮಾಡಿದ ದಿನ) ರಾತ್ರಿ 10.30ರ ನಂತರ ಮೊಬೈಲ್​ ಆನ್ ಮಾಡಿದ್ದ. ಇತ್ತ ಪೊಲೀಸರು ಪ್ರತಿಮಾ ಜತೆ ಸಂಪರ್ಕದಲ್ಲಿದ್ದವರ CDR ಕಲೆ ಹಾಕಿದ್ದ ವೇಳೆಯೇ ಕಿರಣ್​ ಮೊಬೈಲ್ ಆನ್​ ಆಗಿತ್ತು. ಈ ಮಾಹಿತಿ ಆಧಾರದಲ್ಲಿಯೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!