ನವದೆಹಲಿ: ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಹಮಾಸ್‌ನೊಂದಿಗೆ ಇಸ್ರೇಲ್ ಸಂಘರ್ಷ ತೀವ್ರಗೊಂಡಿದೆ. ಈ ನಡುವೆ 212 ಭಾರತೀಯರನ್ನು ಹೊತ್ತ ಎರಡನೇ ಬ್ಯಾಚ್ ಅನ್ನು ಸುರುಕ್ಷಿತವಾಗಿ ಸ್ಥಳಾಂತರಿಸಲಾಗಿದೆ. 2 ಶಿಶುಗಳು ಸೇರಿದಂತೆ 235 ಭಾರತೀಯರನ್ನು ಹೊತ್ತ ಎರಡನೇ ವಿಮಾನ ಭಾರತಕ್ಕೆ ಬಂದಿದೆ. 235 ಭಾರತೀಯ ಪ್ರಜೆಗಳ ಎರಡನೇ ಬ್ಯಾಚ್ ಅನ್ನು ಶುಕ್ರವಾರ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಬಲ್ಲ ಮೂಲಗಳು ಪಿಟಿಐಗೆ ತಿಳಿಸಿವೆ. ಭಾರತೀಯ ರಾಯಭಾರ ಕಚೇರಿಯು “ಮೊದಲಿಗೆ ಬಂದವರಿಗೆ ಮೊದಲು ಸೇವೆ” ಆಧಾರದ ಮೇಲೆ ಪ್ರಯಾಣಿಕರನ್ನು ಆಯ್ಕೆ ಮಾಡಲಾಯಿತು. ಅವರ ವಾಪಸಾತಿ ವೆಚ್ಚವನ್ನು ಸರಕಾರವೇ ಭರಿಸುತ್ತಿದೆ. ಆರೋಗ್ಯ ಆರೈಕೆದಾರರು, ವಿದ್ಯಾರ್ಥಿಗಳು, ಐಟಿ ವೃತ್ತಿಪರರು ಮತ್ತು ವಜ್ರದ ವ್ಯಾಪಾರಿಗಳು ಸೇರಿದಂತೆ ಸುಮಾರು 18,000 ಭಾರತೀಯ ಪ್ರಜೆಗಳು ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
Flight #2 carrying 235 Indian nationals takes off from Tel Aviv. pic.twitter.com/avrMHAJrT4
— Dr. S. Jaishankar (@DrSJaishankar) October 13, 2023