main logo

ಜಿಲ್ಲಾಧಿಕಾರಿಯ ನಿರ್ಧಾರಕ್ಕೆ ಸಿಟಿಗೆದ್ದು ಮತ ಬಹಿಷ್ಕಾರದ ಫ್ಲೆಕ್ಸ್ ಹಾಕಿದ ರೈತ..! ಕೋವಿ ಬಳಕೆದಾರರ ಪರವಾಗಿರುವ ಈ ಫ್ಲೆಕ್ಸ್ ನಲ್ಲೇನಿದೆ..?

ಜಿಲ್ಲಾಧಿಕಾರಿಯ ನಿರ್ಧಾರಕ್ಕೆ ಸಿಟಿಗೆದ್ದು ಮತ ಬಹಿಷ್ಕಾರದ ಫ್ಲೆಕ್ಸ್ ಹಾಕಿದ ರೈತ..! ಕೋವಿ ಬಳಕೆದಾರರ ಪರವಾಗಿರುವ ಈ ಫ್ಲೆಕ್ಸ್ ನಲ್ಲೇನಿದೆ..?

ಇಲ್ಲೊಬ್ಬರ ರೈತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ವಿರುದ್ಧ ಸಿಟಿಗೆದ್ದು ಫೆಕ್ಸ್ ಅಳವಡಿಸಿರುವ ಘಟನೆ ನಡೆದಿದೆ. ಚುನಾವಣೆ ಸಂದರ್ಭವಾಗಿರುವುದರಿಂದ ರೈತರು ತಮ್ಮ ಪರವಾನಗಿ ಹೊಂದಿರುವ ಕೋವಿಗಳನ್ನು ಪೊಲೀಸ್ ಠಾಣೆಯಲ್ಲಿ ತಂದಿರಿಸಬೇಕೆಂಬ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಕ್ರಮವನ್ನು ಬಂಟ್ವಾಳದ ರೈತರೊಬ್ಬರು ಚುನಾವಣಾ ಮತ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆ.

 

ಕೃಷಿಕರಿಗೆ ಚುನಾವಣೆ ಹೆಸರಿನಲ್ಲಿ ಬರೆ..!

ಪ್ರತಿ ಸಲ ಚುನಾವಣಾ ಸಮಯದಲ್ಲಿ ಕೃಷಿಕರ ಕೋವಿಯನ್ನು ಪೊಲೀಸ್ ಠಾಣೆಯಲ್ಲಿಡಲಾಗುತ್ತದೆ. ಇದರಿಂದ ಕಾಡು ಪ್ರಾಣಿಗಳ ಹಾವಳಿಗೆ ತುತ್ತಾಗಿ ಕೃಷಿ ನಷ್ಟಕ್ಕೆ ಒಳಗಾಗುತ್ತದೆ. ಬಂಟ್ವಾಳ ತಾಲೂಕಿನ ಬಡಗಕಜೆಕಾರು ಮತ್ತು ತೆಂಕಕಜೆಕಾರು ಗ್ರಾಮದ ಎಲ್ಲಾ ಅಪರಾಧ ಇಲ್ಲದ ಕೋವಿ ಬಳಕೆದಾರರು ಚುನಾವಣಾ ಮತ ಬಹಿಷ್ಕರಿಸುವಂತೆ ಬಂಟ್ವಾಳ ತಾ.ಪಂ.ಮಾಜಿ ಅಧ್ಯಕ್ಷ ಕೆ.ಎ.ಸತೀಶ್ಚಂದ್ರ ಹೊಸಮನೆ ಮನವಿ ಮಾಡಿಕೊಂಡಿದ್ದಾರೆ. ಅವರು ಕೋವಿ ಬಳಕೆದಾರರ ಪರವಾಗಿ ಫ್ಲೆಕ್ಸ್ ಅಳವಡಿಸಿ ಎಚ್ಚರಿಕೆ ನೀಡಿದ್ದಾರೆ.

 

 

 

 

ಬಂಟ್ವಾಳ ತಾಲೂಕಿನಲ್ಲೂ ಹಲವಾರು‌ ಮಂದಿ ಕೃಷಿಕರು ಪರವಾನಿಗೆಯುಳ್ಳ ಕೋವಿಯನ್ನು ಹೊಂದಿದ್ದಾರೆ. ಸದ್ಯ ಅವರೆಲ್ಲ ಜಿಲ್ಲಾಧಿಕಾರಿಯವರ ಆದೇಶದಂತೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ, ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರವಾನಿಗೆ ಹೊಂದಿರುವ ರೈತರು ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ತಮ್ಮ ಕೋವಿಯನ್ನು ಡೆಪಾಸಿಟ್ ಇರಿಸಿದ್ದಾರೆ. ಕೋವಿ ಠೇವಣಾತಿ ವಿನಾಯಿತಿಗಾಗಿ ಜಿಲ್ಲಾಧಿಕಾರಿ ನೇತೃತ್ವದ ಸ್ಟೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿದ ಹಾಗೂ ಹೈಕೋರ್ಟ್ ಮೆಟ್ಟಿಲೇರಿದ್ದ ಸುಳ್ಯ ಮತ್ತು ಕಡಬದ ಸುಮಾರು 197 ರೈತರಿಗೆ ವಿನಾಯಿತಿ ನೀಡಿ ಸ್ಟೀನಿಂಗ್ ಕಮಿಟಿ ಮತ್ತು ಹೈಕೋರ್ಟ್ ಆದೇಶ ಮಾಡಿದೆ. ಆದರೆ ಬಂಟ್ವಾಳ ಪರಿಸರದ ಕೋವಿ ಹೊಂದಿದ ರೈತರು‌ ಯಾರು ಕೂಡ ವಿನಾಯಿತಿ ಕೋರಿ ನ್ಯಾಯಾಲಯದ ಮೋರೆ ಹೋದ ಬಗ್ಗೆ ಸ್ಪಷ್ಟತೆಯಿಲ್ಲ. ಇದೀಗ ಬಂಟ್ವಾಳದಲ್ಲಿ ಪರವಾನಿಗೆ ಹೊಂದಿರುವ ಕೋವಿದಾರರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!