ಚಂಡಿಗಢ: ಮದ್ದು ತರಲೆಂದು ಮೆಡಿಕಲ್ ಶಾಪ್ ಗೆ ಹೋದ ವೃದ್ಧನೊಬ್ಬ ಅದೇ ದಾರಿಯಲ್ಲಿದ್ದ ಲಾಟರಿ ಟಿಕೆಟ್ ನ್ನು ಖರೀದಿಸಿ 2.50 ಕೋಟಿ ರೂ.ವಿನ ಬಂಪರ್ ಗೆದ್ದಿದ್ದಾರೆ.
ಪಂಜಾಬ್‌ನ ಹೋಶಿಯಾರ್‌ಪುರದ ಮೂಲದ ಶೀತಲ್ ಸಿಂಗ್ ಲಾಟರಿ ಗೆದ್ದಿರುವ ವೃದ್ಧ. ಮಹಿಲ್ಪುರ ನಿವಾಸಿಯಾಗಿರುವ ಶೀತಲ್ ಸಿಂಗ್ ಇತ್ತೀಚೆಗೆ ಕುಟುಂಬದ ಸದಸ್ಯರೊಬ್ಬರಿಗೆ ಮದ್ದು ತರಲು ಮೆಡಿಕಲ್ ಶಾಪ್ ಗೆ ತೆರಳಿದ್ದರು. ಇದೇ ವೇಳೆ ಮಾರ್ಗದಲ್ಲಿ ದೀಪಾವಳಿ ಬಂಪರ್ ಲಾಟರಿ ಟಿಕೆಟ್ ನ್ನು ಶೀತಲ್ ಖರೀದಿಸಿದ್ದಾರೆ.
ಲಾಟರಿ ಖರೀದಿಸಿ ಮನೆಗೆ ಬಂದ ಸುಮಾರು ನಾಲ್ಕು ಗಂಟೆಗಳ ನಂತರ ಲಾಟರಿ ಕುರಿತು ಕರೆ ಬಂದಿದ್ದು, ಶೀತಲ್ ಅವರು 2.5 ಕೋಟಿ ಗೆದ್ದಿರುವುದಾಗಿ ಲಾಟರಿ ಅವರು ಹೇಳಿದ್ದಾರೆ.
ಲಾಟರಿಯಲ್ಲಿ 2.50 ಕೋಟಿ ಗೆದ್ದಿರುವ ಅವರು, ಲಾಟರಿಯಲ್ಲಿ ಗೆದ್ದ ಮೊತ್ತವನ್ನು ಹೇಗೆ ಬಳಸಬೇಕೆಂದು ಅವರು ಮತ್ತು ಅವರ ಕುಟುಂಬ ನಿರ್ಧರಿಸುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ರೈತನಾಗಿರುವ ಶೀತಲ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಿಬ್ಬರೂ ಮದುವೆಯಾಗಿದ್ದಾರೆ. ಲಾಟರಿ ಸ್ಟಾಲ್‌ನ ಮಾಲೀಕರು ಕಳೆದ 15 ವರ್ಷಗಳಿಂದ ಇದೇ ಉದ್ಯೋಗದಲ್ಲಿದ್ದು, ಮೂರನೇ ಬಾರಿಗೆ ಗ್ರಾಹಕರೊಬ್ಬರಿಗೆ ಕೋಟಿಗಟ್ಟಲೆ ಹಣದ ಲಾಟರಿ ಬಂದಿದೆ ಎಂದು ಅವರು ಹೇಳಿದ್ದಾರೆ.