main logo

ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ, ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ ಮತ ಹಾಕುತ್ತೀರಾ? ಕುಕ್ಕರ್ ಬಾಂಬ್ ಇಟ್ಟವರನ್ನು ಬ್ರದರ್ಸ್ ಎಂದವರಿಗೆ ಮತ ಹಾಕುತ್ತೀರಾ?

ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ, ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ ಮತ ಹಾಕುತ್ತೀರಾ? ಕುಕ್ಕರ್ ಬಾಂಬ್ ಇಟ್ಟವರನ್ನು ಬ್ರದರ್ಸ್ ಎಂದವರಿಗೆ ಮತ ಹಾಕುತ್ತೀರಾ?

ಮಂಗಳೂರು: ಬಿಜೆಪಿ ಲೋಕಸಭೆ ಅಭ್ಯರ್ಥಿ ಬೃಜೇಶ್ ಚೌಟ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಸಮಾವೇಶದಲ್ಲಿ ಉಡುಪಿ -ಚಿಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅಬ್ಬರದ ಭಾಷಣ ಮಾಡಿದ್ದಾರೆ.

 

ಈ ಚುನಾವಣೆ ಭಾರತದ ಭವಿಷ್ಯವನ್ನ ಬರೆಯುವ ಚುನಾವಣೆ. ಇದು ಕೇವಲ ಬಿಜೆಪಿಗೆ ಅಧಿಕಾರ ಕೊಡುವ ಚುನಾವಣೆ ಅಲ್ಲ. ದೇಶವನ್ನು ಯಾರು ಮುನ್ನಡೆಸಬೇಕು ಎಂದು ನಿರ್ಧರಿಸುವ ಚುನಾವಣೆ. ಹಿಂದೆ ದೇಶವನ್ನಾಳಿದ್ದ ಕಾಂಗ್ರೆಸಿನಲ್ಲಿ ರಾಷ್ಟ್ರ ಭಕ್ತರು ಇದ್ದಾರೆ ಅಂತಾ ನಂಬಿದ್ದೆ. ಆದರೆ ಕರ್ನಾಟಕದ ಆತ್ಮ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿಸಿದ್ದಾರೆ. ವಿಧಾನ ಸೌಧದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದುದಕ್ಕೆ ಪಾಕಿಸ್ತಾನಕ್ಕೆ ಜೈ ಎಂದವರಿಗೆ ನೀವು ಮತ ನೀಡ್ತೀರಾ? ರಾಮನ ಹೆಸರಿದೆ ಎಂಬ ಕಾರಣಕ್ಕೆ ಆ ಕೆಫೆಯನ್ನು ಬ್ಲಾಸ್ಟ್ ಮಾಡಿದವರ ಬಗ್ಗೆ ಮೃದು ಧೋರಣೆ ತೋರಿದವರಿಗೆ ಮತ ನೀಡ್ತೀರಾ? ಕುಕ್ಕರ್ ಬಾಂಬ್ ಇಟ್ಟವರನ್ನು ಬ್ರದರ್ಸ್ ಎಂದವರಿಗೆ ಮತ ಹಾಕುತ್ತೀರಾ ? ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರನ್ನ ಅಮಾಯಕರು ಅಂದವರಿಗೆ ವೋಟ್ ಕೊಡ್ತೀರಾ? ಎಂದು ಪ್ರಶ್ನೆ ಮಾಡಿದರು.

 

ಟಿಕೆಟ್ ತಪ್ಪಿದ ಸಂದರ್ಭದಲ್ಲೂ ಧೃತಿಗೆಡದೆ ಪಕ್ಷದ ತತ್ವ ಸಿದ್ಧಾಂತ ಪಾಲಿಸಿದ ನಳಿನ್ ಕುಮಾರ್ ಅವರಿಗೆ ಧನ್ಯವಾದ ಸಮರ್ಪಿಸುತ್ತೇನೆ. ರಾಜಕಾರಣದಲ್ಲಿ ಅವಕಾಶ ತಪ್ಪಿದಾಗಲೂ ಪಕ್ಷದ ಸೂಚನೆಯನ್ನು ಪಾಲಿಸಿ ಹೊಸ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನನ್ನ ಗುರಿಯೆಂದ ನಳಿನ್ ಕುಮಾರ್ ಇಡೀ ದೇಶಕ್ಕೆ ಒಬ್ಬ ಆದರ್ಶ ವ್ಯಕ್ತಿ ಎಂದು ಕೋಟ ಹೇಳಿದರು.

 

ಹಿಂದೆ ನಮ್ಮ ದೇಶ ಚಿನ್ನವನ್ನು ವಿದೇಶಕ್ಕೆ ಅಡವಿಟ್ಟು ಸಾಲ ಕೇಳುವ ಸ್ಥಿತಿಯಿತ್ತು. ಮೋದಿ ಬಂದ ಮೇಲೆ ನಮ್ಮ ದೇಶ ಸಾಲ ಕೊಡುವ ದೇಶವಾಗಿದೆ. ಮೋದಿಯವರು ಆಡಳಿತ ವಹಿಸ್ಕೊಂಡ ಬಳಿಕ 70 ದೇಶಗಳಿಗೆ ಸಾಲ ಕೊಡುವಷ್ಟು ಬದಲಾಗಿದೆ. ಕಾಂಗ್ರೆಸ್ ಕಾಲದಲ್ಲಿ ಸೈನಿಕರ, ಸೇನೆಯ ಸ್ಥಿತಿ ಹೇಗಿತ್ತು ಎಂದು ತಿಳಿಯಬೇಕಿದ್ದರೆ ಮೇಜರ್ ದಳವಾಯಿ ಎಂಬ ಯೋಧ ಬರೆದ ಹಿಮಾಲಯನ್ ಬ್ಲಂಡರ್ ಪುಸ್ತಕ ಓದಬೇಕು. ಚೀನಾ ಜೊತೆಗಿನ ಯುದ್ಧದ ಸಂದರ್ಭದಲ್ಲಿ ಹೋರಾಡಲು ಗುಂಡಿಗೆ ಇದ್ದರೂ, ಗುಂಡುಗಳೇ ಇರಲಿಲ್ಲ. ಗನ್, ಶೂಸ್ ಇಲ್ಲದೆ ಸೈನಿಕರು ಪರದಾಡಿದ್ದನ್ನು ಬರೆದಿದ್ದಾರೆ. ಕೊನೆಯಲ್ಲಿ ಈ ಪುಸ್ತಕ ಓದಿಯೂ ಕಾಂಗ್ರೆಸ್ ಮೇಲೆ ನಿಮ್ಮಲ್ಲಿ ಅಭಿಮಾನ ಉಳಿದುಕೊಂಡಿದ್ದರೆ ಆ ಅಭಿಮಾನಕ್ಕೆ ಧಿಕ್ಕಾರ ಎಂದು ಬರೆದಿದ್ದಾರೆ. ನಾವು ಈ ದೇಶಕ್ಕೆ ಯಾರು ಬೇಕು ಅನ್ನುವುದನ್ನು ಯೋಚನೆ ಮಾಡಿ ಮತ ಹಾಕಬೇಕು ಎಂದರು.

Related Articles

Leave a Reply

Your email address will not be published. Required fields are marked *

error: Content is protected !!