ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಕೆನಡಾ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರ ವಿದೇಶ ಪ್ರವಾಸದ ಮಾಹಿತಿ ಒದಗಿಸಿದವರಿಗೆ 125000 ಯು.ಎಸ್ ಡಾಲರ್ ನೀಡುವುದಾಗಿ ಸಿಖ್ ಫಾರ್ ಜಸ್ಟಿಸ್ ಸಂಘಟನೆಯ ಜಿಎಸ್ ಪನ್ನು ಹೇಳಿದ್ದಾನೆ.
ಶುಕ್ರವಾರ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು, ಗೃಹಸಚಿವ, ವಿದೇಶಾಂಗ ಸಚಿವ ಮತ್ತು ಕೆನಡಾ ಭಾರತೀಯ ಹೈಕಮಿಷನರ್ ಪ್ರವಾಸ ಮಾಹಿತಿ ಒದಗಿಸುವಂತೆ ಕೇಳಿಕೊಂಡಿದ್ದಾನೆ. ಅಲ್ಲದೆ ಖಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಈ ಮೂವರು ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಕಳೆದ ಜೂನ್ ನಲ್ಲಿ ವ್ಯಾಂಕೋವರ್ ನಲ್ಲಿ ಖಲಿಸ್ತಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಗಿತ್ತು. ಕೋವರ್ ನಲ್ಲಿರುವ ಭಾರತೀಯ ರಾಜತಾಂತ್ರಿಕ ಆವರಣಗಳಿಗೆ ಮುತ್ತಿಗೆ ಹಾಕಲು ಕೆನಡಾ ಮೂಲದ ಸಿಖ್ ಮೂಲಭೂತವಾದಿಗಳಿಗೆ ಎಸ್ಎಫ್ ಜೆ ಕರೆ ನೀಡಿದೆ.