ಬೆಂಗಳೂರು: ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಗೌಡ ರಮೇಶ್‌ಗೌಡ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.
ಸ್ಪೀಕರ್ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ತೇಜಸ್ವಿನಿ ಗೌಡ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಹೊರಟ್ಟಿ ಅವರು, ಬಿಜೆಪಿಯ ತೇಜಸ್ವಿನಿಗೌಡ ರಮೇಶ್‌ಗೌಡ ರಾಜೀನಾಮೆ ನೀಡಿದ್ದಾರೆ. ವೈಯುಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ತೇಜಸ್ವಿನಿ ರಮೇಶ್ ಅವಧಿ ಜೂನ್‌ವರೆಗೂ ಇತ್ತ, ಅವರೇ ಖುದ್ದು ಹಾಜರಾಗಿ ರಾಜೀನಾಮೆ ಕೊಟ್ಟ ಕಾರಣ ಸ್ವೀಕಾರ ಮಾಡಿದ್ದೇನೆ. ಯಾರೇ ಶಾಸಕರು ರಾಜೀನಾಮೆ ನೀಡಿದರೂ ನಮಗೆ ಮನವರಿಕೆ ಆದ ಮೇಲೆ ಸ್ವೀಕಾರ ಮಾಡೋದು, ಕೆಲವೊಮ್ಮೆ ಭಾವೋದ್ವೇಗಕ್ಕೆ ಒಳಗಾಗಿ, ಒತ್ತಡಗಳಿಗೆ ಒಳಗಾಗಿ ರಾಜೀನಾಮೆ ಕೊಡಬಹುದು. ಹೀಗಾಗಿ ಸ್ವಲ್ಪ ಸಮಯವಕಾಶ ನೀಡಿ ಆ ಬಳಿಕ ರಾಜೀನಾಮೆ ಸ್ವೀಕಾರ ಮಾಡ್ತೀವಿ ಎಂದು ಸ್ಪೀಕರ್ ತಿಳಿಸಿದ್ದಾರೆ.ಮೈಸೂರು ಕೊಡಗು ಕ್ಷೇತ್ರದಿಂದ ಟಿಕೆಟ್ ಮಿಸ್ ಆಗಿದ್ದಕ್ಕೆ ಬಿಜೆಪಿಗೆ ಗುಡ್ ಬೈ ಹೇಳಲು ತೇಜಸ್ವಿನಿಗೌಡ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಿಯೇ ತಮ್ಮ ಎಂಎಲ್ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.