ಬೆಂಗಳೂರು : ಕೆಂಡಸಂಪಿಗೆ, ಟಗರು ಸಿನಿಮಾದಲ್ಲಿ ನಟಿಸಿ ಛಾಪು ಮೂಡಿಸಿದ ನಟಿ ಮಾನ್ವಿತಾ ಕಾಮತ್ ಗೆ ಕಂಕಣ ಕೂಡಿ ಭಾಗ್ಯ ಬಂದಿದೆ.
ಹೌದು, ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಆಗಿರುವ ಅರುಣ್ ಕುಮಾರ್ ಅವರು ಮಾನ್ವಿತಾ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ. ನಟಿ ಮಾನ್ವಿತಾ ಮತ್ತು ಅರುಣ್ ಕುಮಾರ್ ಅವರ ಮದುವೆ ಮೇ 1ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಏಪ್ರಿಲ್ 29ರಂದು ಹಳದಿಶಾಸ್ತ್ರ ನಡೆಯಲಿದ್ದು, ಮೇ 1ರಂದು ಮಂಗಳೂರಿನಲ್ಲಿ ನಡೆಯಲಿದೆ. ಈಗಾಗಲೇ ಮದುವೆ ಸಿದ್ದತೆ ಕೂಡ ಆರಂಭವಾಗಿದೆ