ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಸಮೀಪದ ಕೆಕೋಡ್ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಒಂದೇ ಕುಟುಂಬದ ಮೂವರ ಶವಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಮನೆಯ ಕೋಣೆಯ ಒಳಗೆ ಕಟ್ಟಿಗೆಯನ್ನು ಕೂಡಿಸಿ ಬೆಂಕಿ ಹಚ್ಚಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಆತ್ಮಹತ್ಯೆಯ ಶಂಕೆ ಎದುರಾಗಿದೆ. ಅದೇ ಕುಟುಂಬದ ಮತ್ತೊಬ್ಬ ಸದಸ್ಯನ ಸ್ಥಿತಿ ಗಂಭೀರವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಹಿರಿಯರಾದ ಅರ್ಚಕ ಕೆಲಸ ಮಾಡುತ್ತಿದ್ದ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನ (55), ಹಿರಿಯ ಪುತ್ರ ಶ್ರೀರಾಮ್ 30) ಸಾವಿಗೀಡಾಗಿದ್ದಾರೆ ಮತ್ತೊಬ್ಬ ಪುತ್ರ ಭರತ್ (20 ಗಂಭೀರವಾಗಿ ಯಗೊಂಡಿದ್ದಾರೆ. ಅರಳಸುರಳಿ-ಹೊಸನಗರ ಮಾರ್ಗದಲ್ಲಿ ಕೋಕೋಡ್ ಗ್ರಾಮ ಇದೆ. ಈ ಘಟನೆಯಿಂದ ಗ್ರಾಮದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.