ಮಂಗಳೂರು: ಹಾಸನದಲ್ಲಿ ಈ ಹಿಂದೆ ಅಂಗನವಾಡಿಗಳಿಗೆ ಕೊಳೆತ ಮೊಟೆ ಪೂರೈಸುತ್ತಿರುವ ವಿಚಾರ ರಾಜ್ಯದೆಲ್ಲೆಡೆ ಸುದ್ದಿಯಾಗಿತ್ತು. ಇದೀಗ ಮಂಗಳೂರಿನ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಸುತ್ತಿರುವುದು ಬೆಳಕಿಗೆ ಬಂದಿದೆ.
ವಿಜಯಪುರ ಮೂಲದ ಕಂಪನಿ ಮೊಟ್ಟೆ ಪೂರೈಸುವ ಗುತ್ತಿಗೆ ಪಡೆದಿದ್ದು, ಮೊಟ್ಟೆ ಬೇಯಿಸಿದ ವೇಳೆ ಹುಳ, ಕಪ್ಪಗಾಗಿರುವ ಭಾಗವನ್ನು ಕಂಡು ಅಂಗನವಾಡಿ ಕಾರ್ಯಕರ್ತರು ಕಂಗಾಲಾಗಿದ್ದಾರೆ. ಅದೇರೀತಿ ಅಂಗನವಾಡಿಯಿಂದ ಮೊಟ್ಟೆ ಒಯ್ದಿದ್ದ ಗರ್ಭಿಣಿಯರು, ಬಾಣಂತಿಯರ ಕುಟುಂಬಸ್ಥರು ಕೂಡ ಅಂಗನವಾಡಿ ಶಿಕ್ಷಕಿಯರಿಗೆ ಬೈಯುವ ಪ್ರಕರಣ ನಡೆದಿದೆ.
ಹಾಸನದಲ್ಲಿ ವಾರದ ಹಿಂದೆ ಹಾಳಾದ ಮೊಟ್ಟೆಗಳನ್ನು ಅಂಗನವಾಡಿಗಳಲ್ಲಿ ಪೂರೈಕೆ ಮಾಡಿ ಪ್ರಕರಣ ಬೆಳಕಿಗೆ ಬಂದಿತ್ತು. ಆ ವೇಳೆ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಹಾಕುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.