ನವದೆಹಲಿ: ಹಳದಿ ಸಮುದ್ರದಲ್ಲಿ ವಿದೇಶಿ ಹಡಗುಗಳಿಗಾಗಿ ಹಾಕಲಾದ ಬಲೆಯಲ್ಲಿ ಸಿಲುಕಿ ಚೀನಾದ ಪರಮಾಣು ಸಜ್ಜಿತ ಜಲಾಂತರ್ಗಾಮಿ ನೌಕೆ ಮುಳುಗಿ ಕನಿಷ್ಟ 55 ನಾವಿಕರು ಸಾವನ್ನಪ್ಪಿದ್ದಾರೆ.
ಬಲೆಯನ್ನು ಹಳದಿ ಸಮುದ್ರದಲ್ಲಿ ಬ್ರಿಟಿಷ್ ಮತ್ತು ಅಮೇರಿಕನ್ ಹಡಗುಗಳನ್ನು ತಡೆಯುವ ಉದ್ದೇಶದಿಂದ ಚೀನಾ ನಿರ್ಮಿಸಿತ್ತು. ಆದರೆ ಅದು ತನ್ನದೇ ಬಲೆಗೆ ಸಿಕ್ಕಿಬಿದ್ದಿದೆ. ಅಮೆರಿಕ ಮತ್ತು ಇಂಗ್ಲೆಂಡ್ ದೇಶದ ಹಡಗುಗಳನ್ನು ತಡೆಯಲು ತಯಾರಿಸಿದ ಬಲೆ ಇದಾಗಿದ್ದು ಈ ಬಲೆ ಇದೀಗ ಚೀನಾದ ಜಲಾಂತರ್ಗಾಮಿಯನ್ನೇ ಮುಳುಗಿಸಿದೆ ಎಂದು ಯುಕೆ ಮೂಲದ ದಿ ಟೈಮ್ಸ್ ಬ್ರಿಟಿಷ್ ಗುಪ್ತಚರ ವರದಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಆದಾಗ್ಯೂ, ಜಲಾಂತರ್ಗಾಮಿ ಮುಳುಗಿರುವ ವಿಚಾರವನ್ನು ಚೀನಾ ನಿರಾಕರಿಸಿದೆ. ಚೀನಾ ಆರು ಟೈಪ್-093 ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದ್ದು, ಪ್ರಸ್ತುತ ಹಳದಿ ಸಮುದ್ರದಲ್ಲಿ ಮುಳಗಿದ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ತನ್ನ ಹಿಂದಿನ ಮಾದರಿಗಳಿಗಿಂತ ನಿಶ್ಯಬ್ದವಾಗಿರುವಂತೆ ವಿನ್ಯಾಸಗೊಳಿಸಲಾಗಿತ್ತು.ಕಳೆದ 15 ವರ್ಷಗಳಲ್ಲಿ ಸೇವೆ ಸಲ್ಲಿಸುತ್ತಿತ್ತು ಎಂದು ಟೈಮ್ಸ್ ವರದಿ ಮಾಡಿದೆ.