main logo

ಮಂಡ್ಯ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ ಸುಮಲತಾ ಅಂಬರೀಶ್ ಮೈತ್ರಿ ಅಭ್ಯರ್ಥಿಗೆ ಬೆಂಬಲ

ಮಂಡ್ಯ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ ಸುಮಲತಾ ಅಂಬರೀಶ್ ಮೈತ್ರಿ ಅಭ್ಯರ್ಥಿಗೆ ಬೆಂಬಲ

ಮಂಡ್ಯ: ಲೋಕಸಭೆ ಚುನಾವಣೆ ಕುರಿತಂತೆ ತಮ್ಮ ನಿರ್ಧಾರವನ್ನು ಸುಮಲತಾ ಅವರು ತಿಳಿಸಿದ್ದಾರೆ. ಅವರು ಇಂದು ಬೆಳಗ್ಗೆ 10 ಗಂಟೆಗೆ ಮಂಡ್ಯ ಕಾಳಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ದೇವಸ್ಥಾನದ ಆವರಣದಲ್ಲೇ ಲೋಕಸಭೆ ಚುನಾವಣೆಯ ಕುರಿತಂತೆ ಅವರ ನಿರ್ಧಾರವನ್ನು ತಿಳಿಸಿದರು.ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಸಂಸದೆ ಸುಮಲತಾ ಅಂಬರೀಶ್‌ ಅವರು ಹೇಳಿದರು.

 

 

 

ಕೊನೆ ಹಂತದ ತನಕ ನಾನು ಮಂಡ್ಯವನ್ನು ಬಿಜೆಪಿಗೆ ಉಳಿಸಿಕೊಳ್ಳುವುದಕ್ಕೆ ನಾನು ಹೋರಾಡಿದೆ. ನನಗೆ ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ, ಮೈಸೂರಿನಿಂದ ಹಾಗೂ ಹಲವು ಆಮೀಶಗಳು ಬಂದವು ಆದರೆ ನಾನು ಮಂಡ್ಯ ಬಿಟ್ಟು ಹೋಗುವುದಿಲ್ಲ ಅಂತ ಹೇಳಿದರು. ನನಗೆ ಸ್ವಾರ್ಥ ರಾಜಕಾಣ ಮಾಡಿ ಗೊತ್ತಿಲ್ಲ ಅಂತ ಹೇಳಿದರು. ಹಲವು ಮಂದಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವಂತೆ ಕೇಳಿದರು. ಇನ್ನೂ ಕೆಲವು ಮಂದಿ ಏಕಾಂಗಿಯಾಗಿ ಸ್ಪರ್ಧೆ ಮಾಡುವಂತೆ ಹೇಳಿದರು. ಇನ್ನೂ ಹಲವು ಕಡೆಗಳಲ್ಲಿ ಮಾಹಿತಿಯನ್ನು ಪಡೆದುಕೊಂಡು, ನಾನು ಕೂಡ ಚರ್ಚೆ ಮಾಡಿ ನಾನು ನಿರ್ಧಾರ ಮಾಡಿ ಈ ನಿರ್ಧಾರವನ್ನು ತೆಗೆದುಕೊಂಡಿರುವೆ ಅಂತ ಹೇಳಿದರು. ನನಗೆ ಪ್ರಧಾನಿ ಮೋದಿಯವರು ಕೂಡ ನನ್ನ ಸ್ಪರ್ಧೆ ಬಗ್ಗೆ ಮಾತನಾಡಿ ನನಗೆ ಸಂದೇಶವನ್ನು ನೀಡಿದ್ದಾರೆ ಅಂಥ ಹೇಳಿದ್ದಾರೆ.

 

ಈ ವೇಳೆ ಮಾತನಾಡಿದ ಅವರು ಐದು ವರ್ಶಗಳ ಹಿಂದೆ, ನಾನು ಐತಿಹಾಸಿಕ ಗೆಲುವು ನೀಡಿದ್ದೀರಾ. ನಿಮಗೆಲ್ಲ ನನ್ನ ಧನ್ಯವಾದಗಳು ಅಂತ ಹೇಳಿದರು. ಈ ಹಿಂದೆ ನಾನು ತೆಗೆದುಕೊಂಡ ಸಮಯದಲ್ಲಿ ನನ್ನ ಪರವಾಗಿ ನೀವು ನಿಂತಿದ್ದೀರಾ. ಈ ನಿಟ್ಟಿನಲ್ಲಿ ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುವೆ ಅಂತ ಹೇಳಿದರು. ಇದಲ್ಲದೇ ನನಗೆ ಪ್ರತಿಯೊಬ್ಬರು ಕೂಡ ನನಗೆ ಬೆಂಬಲವಾಗಿ ನಿಂತುಕೊಂಡಿದ್ದೀರಾ ಆಂತ ತಿಳಿಸಿದರು.

 

 

 

ಇನ್ನೂ ಅಂಬರೀಶ್‌ ಅವರ ಸೇವೆಯನ್ನು ಮುಂದುವರೆಸಿಕೊಂಡು ಹೋಗುವುದು ಮಾತ್ರ ನಮಗೆ ಮುಖ್ಯವಾಗಿತ್ತು, ನನಗೆ ರಾಜಕೀಯ ಮುಖ್ಯವಾಗಿ ಇರೋದು ಇಲ್ಲ. ಜನತೆಯಿಂದಾಗಿ ನಾನು ರಾಜಕೀಯಕ್ಕೆ ಬಂದಿರುವೆ, ಗೆಲುವು ಕಂಡ ಬಳಿಕ ನನ್ನ ದಾರಿ ಸುಲಭವಾಗಿ ಇರಲಿಲ್ಲ. ನನ್ನ ಪ್ರತಿಯೊಂದು ಹೆಜ್ಜೆಯನ್ನು ಎಚ್ಚರದಿಂದ ನಡೆದುಕೊಂಡು ಬಂದೆ. ನನ್ನ ಗುರಿ ನನ್ನ ಜಿಲ್ಲೆಯ ಎಲ್ಲಾ ವರ್ಗದ ಜನತೆ ಪರವಾಗಿ ನಿಂತುಕೊಳ್ಳಬೇಕು, ಬದಲಾವಣೆ ತರಬೇಕು ಎನ್ನುವುದು ನನ್ನ ಮನಸ್ಸಿನಲ್ಲಿ ಇರುವುದು ಆಗಿತ್ತು. ಈ ನಿಟ್ಟಿನಲ್ಲಿ ಈ ಐದು ವರ್ಶದಲ್ಲಿ ನಾನು ಕೆಲವು ಯಶಸ್ವಿಯಾಗಿ ಕೆಲಸ ಮಾಡಿರುವೆ ಅಂತ ಹೇಳಿದರು.

 

ಇದಕ್ಕೂ ಮುನ್ನ ಮಾತನಾಡಿದ ದರ್ಶನ್‌ ಅವರು ಮಾತನಾಡಿ ನಮ್ಮ ಅಮ್ಮ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ನಾವು ಬದ್ದರಾಗಿದ್ದೇವೆ, ಅವರು ಹೇಳಿದ ರೀತಿಯಲ್ಲಿ ನಾವು ನಡೆದುಕೊಳ್ಳುತ್ತೇವೆ ಅಂಥ ಹೇಳಿದರು.

 

 

Related Articles

Leave a Reply

Your email address will not be published. Required fields are marked *

error: Content is protected !!