ಸುಳ್ಯ: ವಿಸ್ತಾರ ಏರ್ ಲೈನ್ಸ್ (Vistara Airlines) ಸಂಸ್ಥೆಯಲ್ಲಿ ಉದ್ಯೋಗ ತಿಳಿಸಿಕೊಡುವುದಾಗಿ ನಂಬಿಸಿ ಅವರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಂದ 13 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಪೀಕಿಸಿರುವ ಘಟನೆ ನಡೆದಿದೆ.
ಸುಳ್ಯ (Sullia) ತಾಲೂಕಿನ ಅಮರಪಡೂರು ಗ್ರಾಮದ ನಿವಾಸಿ ಯಶ್ಚಿನಿ ಕೆ ಬಿ ಎಂಬವರು ವಂಚನೆಗೆ ಒಳಗಾದವರು, ಅಪರಿಚಿತ ವ್ಯಕ್ತಿ ಜುಲೈ 15ರಂದು ಫೋನ್ ಮಾಡಿದ್ದು ತನ್ನನ್ನು ವಿಸ್ತಾರ ಏರ್ ಲೈನ್ಸ್ ಸಿಂಗಾಪುರ ಬ್ರಾಂಚ್ ದೇವನಹಳ್ಳಿ, ಬೆಂಗಳೂರು ಸಂಸ್ಥೆಯಿಂದ ಎಂದು ಪರಿಚಯಿಸಿಕೊಂಡು, ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಖಾಲಿಯಿದ್ದು, ಹೆಚ್ಚಿನ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳು ನೀಡುವುದಾಗಿ ನಂಬಿಸಿದ್ದ.
ಆದರೆ, ಉದ್ಯೋಗ ತೆಗೆಸಿಕೊಡಲು ಹಣದ ಅಗತ್ಯವಿದೆಯೆಂದು ತಿಳಿಸಿದ್ದು, ಪದೇ ಪದೇ ಕರೆ ಮಾಡಿ ಹಣ ಕೇಳಿ ಪಡೆದಿದ್ದಾನೆ. ಒಟ್ಟು ವಿವಿಧ ಹಂತಗಳಲ್ಲಿ 13,00,990 ರೂ. ಗಳನ್ನು ಆನ್ನೈನ್ ಮೂಲಕ ಪಾವತಿಸಿದ್ದು, ಉದ್ಯೋಗ ನೀಡದೇ ಮೋಸ ಮಾಡಿದ್ದಾರೆ ಎಂದು ವಂಚನೆಗೊಳಗಾದ ಮಹಿಳೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದೀಗ ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಕಲಂ 419, 420 ಮತ್ತು ಐಟಿ ಆಕ್ಸ್ (6 (2) ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.