ಮುಸ್ಲಿಂ ಯುವಕನೋರ್ವ ಸುಳ್ಯದ ಗಾಂಧೀನಗರದಲ್ಲಿ ಮೊಬೈಲ್ ರೀಚಾರ್ಜ್ ಗೆ ಬಂದ ಹಿಂದೂ ಹುಡುಗಿಯ ಫೋಟೋ ತೆಗೆದ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಠಾಣೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದಾರೆ. ಮತ್ತೊಂದು ಕಡೆ ಯುವಕನ ಕೂರಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದೂ ಹುಡುಗೀರ ಫೋಟೋ ತೆಗೆಯುವ ಈತನ ವಿಕೃತ ಚಾಳಿ ಇದು ಮೊದಲೇನಲ್ಲ.
ಎರಡು ವರ್ಷಗಳ ಹಿಂದೆಯೂ ಇದೇ ರೀತಿ ಯುವತಿಯೊಬ್ಬಳ ಫೋಟೋ ಕ್ಲಿಕ್ಕಿಸಿ ಸಿಕ್ಕಿಬಿದ್ದಿದ್ದ. ಈತನ ವಿರುದ್ಧ ದೂರು ದಾಖಲಾಗಿತ್ತು. ಎಚ್ಚರಿಕೆಯನ್ನು ನೀಡಿ ಕಳುಹಿಸಲಾಗಿತ್ತು. ಆದರೆ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಅನ್ನುವ ಮಾತಿದೆ. ಅಂತೆಯೇ ಎಚ್ಚರಿಕೆ ಮಾತನ್ನು ಆ ಕಿವಿಯಲ್ಲಿ ಕೇಳಿ ಈ ಕಿವಿಯಲ್ಲಿ ಬಿಟ್ಟು ಬಿಟ್ಟಿದ್ದಾನೆ. ಮತ್ತೆ ಎಂದಿನಂತೆ ತನ್ನ ಚಾಳಿಯನ್ನು ಮುಂದುವರಿಸಿದ್ದಾನೆ ಎಂದು ತಿಳಿದು ಬಂದಿದೆ.