Site icon newsroomkannada.com

ಬ್ಯಾಂಕ್‌ ಸಾಲದ ನೋಟಿಸ್‌ ಕಂಡು ಆತ್ಮಹತ್ಯೆಗೆ ಯತ್ನ

ಬಂಟ್ವಾಳ: ಕಾವಳ ಮೂಡೂರು ಗ್ರಾಮದ ಪಂಜಾಡಿ ನಿವಾಸಿ ಗುರುಪ್ರಸಾದ್ ಪ್ರಭು ಅವರು ಆತ್ಮಹತ್ಯೆಗೆ ಯತ್ನಿಸಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಸಹಕಾರಿ ಸಂಘವೊಂದರ ಸಾಲದ ನೋಟಿಸ್ ಕಂಡು ಅಘಾತಗೊಂಡು ಆತ್ಮಹತ್ಯೆಗೈಯಲು ಪ್ರಯತ್ನಿಸಿದರೆಂದು ಆರೋಪಿಸಲಾಗಿದೆ. ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಅವರಿಗೆ ಮರುಪಾವತಿಯ ಕುರಿತು ನೋಟಿಸ್ ಬಂದಿದ್ದು, ಆದರೆ ಬ್ಯಾಂಕಿನಲ್ಲಿ ಅವರ ಯಾವುದೇ ಸಾಲ ಇಲ್ಲ. ಈ ಕುರಿತು ಪುಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣದ ಕುರಿತು. ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಶನಿವಾರ ರಾತ್ರಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

Exit mobile version