ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆಯುತ್ತಿದ್ದು, ಸಿಎಂ ಅವರೊಂದಿಗೆ ಉಡುಪಿ ದಕ್ಷಿಣ ಕನ್ನಡ ಪ್ರವಾಸದಲ್ಲಿರುವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಕಾನೂನನ್ನು ಕೈಗೆ ತೆಗೆದುಕೊಳ್ಳುವುದು, ಭಯಸೃಷ್ಟಿಸುವುದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ. ಪೊಲೀಸರಿಗೆ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಇಂತಹ ವಿಷಯದಲ್ಲಿ ನೂರಕ್ಕೆ ನೂರು ಕಠಿಣಕ್ರಮ ಕೈಗೊಳ್ಳುತ್ತೇವೆ. ಜಿಲ್ಲೆಗೆ ಕೆಟ್ಟ ಹೆಸರು ತರಲು ಕೋಮುವಾದಿ ಶಕ್ತಿಗಳ ಪ್ರಯತ್ನ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮಂಗಳೂರಿಗೆ ವಿದ್ಯಾರ್ಜನೆಗೆ ಬರಲು ಭಯ ಆಗುತ್ತಿದೆ. ಆಡ್ಮಿಷನ್ ಆಗಿದೆ ಕಾಲೇಜಿಗೆ ಹೋಗಲು ಭಯ ಆಗುತ್ತಿದೆ ಅಂತಾ ವಿದ್ಯಾರ್ಥಿಗಳು ನನಗೆ ದೂರು ನೀಡಿದ್ದಾರೆ.
ಭಯ ಪಡಬೇಡಿ ಅಂತಾ ವಿದ್ಯಾರ್ಥಿಗಳನ್ನು ಕಳುಹಿಸಿದ್ದೇನೆ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಈ ಕೆಲಸ ನಡೆಯುತ್ತಿದೆ. ಈ ಕೆಲಸಕ್ಕೆ ಮತೀಯವಾದಿ ಶಕ್ತಿಗಳು ಸೇರಿಕೊಳ್ಳುತ್ತಿವೆ. ಈ ಕೆಲಸ ಮಾಡುವವರನ್ನು ಗಡಿಪಾರು ಮಾಡುತ್ತೇವೆ. ಇಂತಹ ಕ್ರಿಮಿನಲ್ ಗಳಿಗೆ ಬಿಜೆಪಿ ಸಪೋರ್ಟ್ ಮಾಡುತ್ತಿದೆ. ಬಿಜೆಪಿಗೆ ಜಿಲ್ಲೆಯಲ್ಲಿ ಸಾಮರಸ್ಯ ಇರೋದು ಬೇಡ. ಬಿಜೆಪಿ ಜಿಲ್ಲೆಯ ಶಾಂತಿಗೆ ಸಹಕಾರವನ್ನು ನೀಡಬೇಕು ಎಂದರು.