Site icon newsroomkannada.com

ಪ್ರಸಿದ್ಧ ನಟನಿಗೆ ವಿದ್ಯಾರ್ಥಿನಿಯರಿಂದ ವಿಚಿತ್ರ ಬೇಡಿಕೆ; ಪರಸ್ಪರ ಕಿಸ್‌ ಕೊಡುತ್ತಾ ಇಬ್ಬರು ವಿದ್ಯಾರ್ಥಿನಿಯರು ಮಾಡಿದ್ದೇನು

ವಿಡಿಯೋ ನೋಡಿ
ಬೆಂಗಳೂರು: ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಅವರಿಗೆ ಲೇಡಿ ಫ್ಯಾನ್ಸ್‌ಗಳು ಹೆಚ್ಚು. ಅದೇ ರೀತಿ ವಿಜಯ್‌ ದೇವರಕೊಂಡ (Vijay Devarakonda) ಕೂಡ ಸೋಷಿಯಲ್‌ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳ ಜತೆ ಮಾತುಕತೆ ನಡೆಸುತ್ತಲೇ ಇರುತ್ತಾರೆ. ಆದರೀಗ ವಿದ್ಯಾರ್ಥಿನಿಯರಿಬ್ಬರು ನಟನಿಗೆ ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ವಿಚಿತ್ರ ಎಂದರೆ ವಿಜಯ್‌ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದ್ರೆ ವಿದ್ಯಾರ್ಥಿನಿಯರು ನಟನಿಗೆ ಕೇಳಿದ್ದೇನು? ಮುಂದೆ ಓದಿ!

ವಿದ್ಯಾರ್ಥಿನಿಯರು ರೀಲ್ಸ್‌ ಪೋಸ್ಟ್‌ ಮಾಡಿ, ಈ ಪೋಸ್ಟ್‌ಗೆ ವಿಜಯ್ ದೇವರಕೊಂಡ ಕಮೆಂಟ್ ಮಾಡಿದರೆ ಮಾತ್ರ ನಾವು ಪರೀಕ್ಷೆಗೆ ತಯಾರಿ ನಡೆಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಈ ರೀತಿ ವಿದ್ಯಾರ್ಥಿನಿಯರು ಬೇಡಿಕೆ ಇಡುತ್ತಿದ್ದಂತೆ ನೆಟ್ಟಿಗರು ಕೂಡ ಖಂಡಿತ ನಟ ಪ್ರತಿಕ್ರಿಯೆ ನೀಡಲ್ಲ ಎಂದು ಕಮೆಂಟ್‌ ಮಾಡಿದ್ದರು. ನಿಮ್ಮ ವೀಡಿಯೊ ನೋಡಿ ನಿಜಕ್ಕೂ ವಿಜಯ್‌ ಕಮೆಂಟ್ ಮಾಡ್ತಾರಾ? ಅಷ್ಟೆಲ್ಲಾ ಸೀನ್ ಇದ್ಯಾ? ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಆದರೆ ಕೊನೆಗೆ ಆಗಿದ್ದೇ ಬೇರೆ. ʻಪರೀಕ್ಷೆಯಲ್ಲಿ 90% ಅಂಕ ಗಳಿಸಿದರೆ ನಿಮ್ಮನ್ನು ಖಂಡಿತ ಭೇಟಿ ಮಾಡುತ್ತೇನೆʼ ಎಂದು ವಿಜಯ್‌ ಕಮೆಂಟ್ ಮಾಡಿದ್ದಾರೆ. ವಿಜಯ್ ಪ್ರತಿಕ್ರಿಯೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ ‘ಫ್ಯಾಮಿಲಿ ಸ್ಟಾರ್’ ಎನ್ನುವ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೃಣಾಲ್ ಠಾಕೂರ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಏಪ್ರಿಲ್ 5ಕ್ಕೆ ಸಿನಿಮಾ ತೆರೆಗೆ ಬರಲಿದೆ. ದೇವರಕೊಂಡ ನಟನೆಯ 12ನೇ ಸಿನಿಮಾ ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ಪೊಲೀಸ್ ಆಫಿಸರ್ ಆಗಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಚಿತ್ರಕ್ಕೆ ಕನ್ನಡ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆ ಆಗುವ ಸಾಧ್ಯತೆಯಿದೆ.

https://www.instagram.com/harshithaareddy__/

Exit mobile version