Site icon newsroomkannada.com

ಕಂಕನಾಡಿಯಲ್ಲಿ ಭೀಕರ ಅಪಘಾತ ಬೈಕ್‌ ಸವಾರ ಸಾವು

ಫುಡ್ ಡೆಲಿವರಿ ಮಾಡುತ್ತಿದ್ದ ಕಕ್ಕಿಂಜೆ ಚಾರ್ಮಾಡಿ ನಿವಾಸಿ, ವಿದ್ಯಾರ್ಥಿ ಸಿನಾನ್ ಸ್ಥಳದಲ್ಲೇ ಸಾವು
ಬೆಳ್ತಂಗಡಿ: ಬಸ್‌ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ದಾರುಣವಾಗಿ ಮೃತಪಟ್ಟ ಘಟನೆ ಮಾ 1ರಂದು ರಾತ್ರಿ ಮಂಗಳೂರಿನ ಕಂಕನಾಡಿ ಸಮೀಪ ನಡೆದಿದೆ.
ಕಕ್ಕಿಂಜೆ ಸಮೀಪದ ಚಾರ್ಮಾಡಿ ಜಲಾಲಿಯಾ ನಗರದ ನಿವಾಸಿ, ವಹೀದಾ ಅವರ ಮಗ ಸಿನಾನ್ (21 ವರ್ಷ) ಮೃತಪಟ್ಟ ದುರ್ದೈವಿ. ಇವರನ್ನು ಮಂಗಳೂರಿನ ಯೆನಪೋಯ ಕಾಲೇಜಿನ ವಿಧ್ಯಾರ್ಥಿ ಎಂದು ಗುರುತಿಸಲಾಗಿದೆ.
ಬಡಕುಟುಂಬದ ಸಿನಾನ್ ಪಾರ್ಟ್ ಟೈಮ್ ಪುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು. ತನ್ನ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಅವರು, ವಿದ್ಯಾಭ್ಯಾಸವನ್ನು ತನ್ನ ಖರ್ಚಿನಿಂದಲೇ ನಿಭಾಯಿಸುತ್ತಿದ್ದರು. ಇದೇ ರೀತಿ ನಿನ್ನೆ ರಾತ್ರಿ ವೇಳೆ ಫುಡ್ ಡೆಲಿವರಿ ಮಾಡುತ್ತಿದ್ದಾಗ ವಾಹನ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಖಾಸಗಿ ಬನ್ನೊಂದು ಬೈಕನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕಿನ ಹ್ಯಾಂಡ್ಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಬಸ್ಸಿನಡಿಗೆ ಬಿದ್ದು, ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತರು ತಂದೆ, ತಾಯಿ, ತಮ್ಮ, ತಂಗಿಯನ್ನು ಅಗಲಿದ್ದಾರೆ.

Exit mobile version