Site icon newsroomkannada.com

ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

ಮೂಡುಬಿದಿರೆ: ಮೆದುಳು ಜ್ವರ ಉಪಶಮನವಾಗದೆ ಉಲ್ಬಣಗೊಂಡ ಪರಿಣಾಮ ಶಿರ್ತಾಡಿ ಮೌಂಟ್‌ ಕಾರ್ಮೆಲ್‌ ಹೈಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿನಿ ಸ್ವಸ್ತಿ ಶೆಟ್ಟಿ (15) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟರು.

ತ್ರೋಬಾಲ್‌ ಆಟಗಾರ್ತಿಯಾಗಿದ್ದ ಈಕೆ ಉತ್ತಮ ನೃತ್ಯಪಟುವೂ ಆಗಿದ್ದರು. ತಂದೆ ಸತೀಶ್‌ ಶೆಟ್ಟಿ ಗೋವಾದಲ್ಲಿ ಉದ್ಯೋಗದಲ್ಲಿದ್ದು ತಾಯಿ ಸರಿತಾ ಶೆಟ್ಟಿ ಶಿರ್ತಾಡಿ ನವಮೈತ್ರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಉದ್ಯೋಗಿ. ಮೂಲತಃ ವಾಲ್ಪಾಡಿಯವರಾದ ಇವರು ಪ್ರಸ್ತುತ ಮೂಡುಬಿದಿರೆಯಲ್ಲಿ ನೆಲೆಸಿದ್ದಾರೆ.

 

Exit mobile version