main logo

ಖರ್ಚಿಗೆ ಹಣ ನೀಡಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಖರ್ಚಿಗೆ ಹಣ ನೀಡಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಮಂಗಳೂರು: ಕೆಪಿಟಿ ಕಾಲೇಜಿಗೆ ಪ್ರವೇಶಾತಿ ಪಡೆದ ಮೊದಲ ದಿನವೇ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯವರು ಖರ್ಚಿಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸುಭಾಷ್ ನಗರದ ಭಾಸ್ಕರ್ ಪೂಜಾರಿ ಮತ್ತು ದಾಕ್ಷಾಯಣಿ ದಂಪತಿಯ ಪುತ್ರ ಸುಶಾಂತ್ (17) ಆತ್ಮಹತ್ಯೆ ಮಾಡಿಕೊಂಡವರು. ನಗರದ ಕಪಿತಾನಿಯೋ ಶಾಲೆಯಲ್ಲಿ ಪ್ರಥಮ ಪಿಯು ಮುಗಿಸಿದ್ದ ಆತ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾವನ್ನು ಮುಂದುವರಿಸಲು ಬಯಸಿದ್ದರಿಂದ, ಆತನ ಪೋಷಕರು ಅವನನ್ನು ಆಗಸ್ಟ್ 2 ರಂದು ಕೆಪಿಟಿಗೆ ಸೇರಿಸಿದರು. ಕಾಲೇಜಿನ ಮೊದಲ ದಿನ ಆತನಿಗೆ 500 ರೂ. ನೀಡಿದ್ದರು. ಆದರೆ ಮಾರನೇ ದಿನ ಅಂದರೆ ಆಗಸ್ಟ್ 3 ರಂದು ಸುಶಾಂತ್ ಕಾಲೇಜಿಗೆ ಹೊರಡುವ ವೇಳೆ 500 ರೂ. ಕೇಳಿದ್ದು, ಪೋಷಕರು ನೀಡಿರಲಿಲ್ಲ. ಇದರಿಂದ ಮನನೊಂದ ಸುಶಾಂತ್ ಮನೆಯಲ್ಲೇ ಉಳಿದುಕೊಂಡಿದ್ದರು. ಬಳಿಕ ತಂದೆ ಮನೆಯಿಂದ ಹೋಗಿದ್ದರು. ತಾಯಿ ಅಡುಗೆ ಕೃತ್ಯದಲ್ಲಿ ನಿರತರಾಗಿದ್ದು, ತನ್ನ ಕೋಣೆಯ ಛಾವಣಿಯ ಮರದ ದಿಮ್ಮಿಗೆ ನೇಣು ಹಾಕಿಕೊಂಡಿದ್ದಾನೆ.
ಈ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!