Site icon newsroomkannada.com

ಇಂದೆಂತ ವಿಚಿತ್ರ: ವ್ಯಕ್ತಿಯ ಹೊಟ್ಟೆಯಿಂದ ಹೊರಬಂತು , ರಾಖಿ, ದಾರ, ಕೀ, ಬೀಗ, ವಾಷರ್

ಪಂಜಾಬ್‌: ಕೆಲವರಿಗೆ ಉಗುರು ಕಚ್ಚುವ, ಮೂಗಿನೊಳಗೆ ಆಗಾಗ್ಗೆ ಕೈ ಹಾಕುವ ದುರಾಭ್ಯಾಸಗಳಿರುತ್ತವೆ. ಆದರೆ ಇಲ್ಲೊಬ್ಬ ಪುಣ್ಯಾತ್ಮ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ಬಾಯಿಗೆ ಹಾಕಿಕೊಂಡು ಹಲವು ವರ್ಷಗಳ ಬಳಿಕ ಅಯ್ಯೋ ಹೊಟ್ಟೆ ನೋವು ಎಂದು ಆಸ್ಪತ್ರೆ ಸೇರಿದ ಬಳಿಕ ವೈದ್ಯರು ಅದನ್ನೆಲ್ಲ ಹರಸಾಹಸಪಟ್ಟು ಹೊರತೆಗೆದ ಘಟನೆ ನಡೆದಿದೆ.
ಪಂಜಾಬ್​ನ ಮೊಗಾದ 40 ವರ್ಷದ ವ್ಯಕ್ತಿಯೊಬ್ಬರು ಕಳೆದ ಎರಡು ದಿನಗಳಿಂದ ತುಂಬಾ ಹೊಟ್ಟೆನೋವು ಬರುತ್ತಿದೆ ಎಂದು ವೈದ್ಯರ ಬಳಿಗೆ ಬಂದಿದ್ದರು, ವೈದ್ಯರು ಎಕ್ಸ್​-ರೇ ಮಾಡಿ ನೋಡಿದಾಗ ಅವರ ಹೊಟ್ಟೆಯಲ್ಲಿ ಹಲವು ವಸ್ತುಗಳಿರುವುದು ಕಂಡುಬಂದಿದೆ. ಹಾಗಾಗಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಅವರ ಹೊಟ್ಟೆಯಿಂದ ಇಯರ್​ಫೋನ್​ಗಳು, ರಾಖಿ, ದಾರಗಳು, ಮೊಳೆಗಳು, ಕೀ, ಬೀಗ, ವಾಷರ್​ಗಳು ಸೇರಿದಂತೆ ಹಲವು ವಸ್ತುಗಳಿದ್ದವು. ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅವರು ಮೊಗದ ಮೆಡಿಸಿಟಿ ಆಸ್ಪತ್ರೆಗೆ ಭೇಟಿ ನೀಡಿದರು, ತೀವ್ರ ಹೊಟ್ಟೆ ನೋವು, ಜ್ವರ ಮತ್ತು ವಾಂತಿ ಹೇಳಿಕೊಂಡಿದ್ದರು.

ಮೆಡಿಸಿಟಿ ನಿರ್ದೇಶಕ ಡಾ ಅಜ್ಮೀರ್ ಕಲ್ರಾ ಅವರು ಮಾತನಾಡಿ, ತಮ್ಮ ವೃತ್ತಿಜೀವನದಲ್ಲಿ ಇದು ಮೊದಲ ಪ್ರಕರಣವಾಗಿದೆ, ಆದರೆ ವೈದ್ಯರು ಈ ಎಲ್ಲಾ ವಸ್ತುಗಳನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ ಎಂದಿದ್ದಾರೆ. ಆದರೆ, ಈ ವಸ್ತುಗಳು ಹೊಟ್ಟೆಯಲ್ಲಿ ಬಹಳ ಸಮಯ ಇದ್ದ ಕಾರಣ ರೋಗಿಯ ಸ್ಥಿತಿ ಇನ್ನೂ ಸ್ಥಿರವಾಗಿಲ್ಲ ಎಂದು ಅವರು ಹೇಳಿದರು. ರೋಗಲಕ್ಷಣಗಳು ಉಲ್ಬಣಗೊಂಡ ನಂತರ ಮತ್ತು ಅವರು ನಿದ್ರಿಸಲು ಸಹ ಸಾಧ್ಯವಾಗಲಿಲ್ಲ, ನಾವು ವೈದ್ಯರನ್ನು ಸಂಪರ್ಕಿಸಿದ್ದೇವೆ ಎಂದು ಕುಟುಂಬದವರು ಹೇಳಿದ್ದಾರೆ.

Exit mobile version