newsroomkannada.com

ಗಟ್ಟಿ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ: ಗಟ್ಟಿ ಸಮಾಜದ ಬಾಂಧವರಿಂದ ನಾಳೆ ತುರ್ತು ಸಭೆ

ಉಳ್ಳಾಲ: ಗಟ್ಟಿ ಸಮಾಜದ ಬಗೆ ಕಾಂಗ್ರೆಸ್ ಮುಖಂಡ ಸದಾಶಿವ ಉಳ್ಳಾಲ ಅವಹೇಳನಕಾರಿ ಹೇಳಿಕೆ ನೀಡಿದ್ದು ಈ ವಿಚಾರ ಗಟ್ಟಿ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಗಟ್ಟಿ ಸಮಾಜದ ಪ್ರಮುಖರು ಸುದ್ದಿಗೋಷ್ಠಿ ನಡೆಸಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ ಆ ಬಳಿಕ ಸದಾಶಿವ ಉಳ್ಳಾಲರು ಲಿಖಿತ ರೂಪದಲ್ಲಿ ಕ್ಷಮೆ ಕೇಳಿದ್ದಾರೆ.ಆದರೆ ಲಿಖಿತ ರೂಪದಲ್ಲಿ‌ ಕ್ಷಮೆ ಕೇಳಿದರೆ ಸಾಕಾಗಲ್ಲ ನೀವು ಹೇಗೆ ಸುದ್ದಿಗೋಷ್ಠಿ ನಡೆಸಿ ಅವಮಾನ ಮಾಡಿದ್ದೀರೋ ಹಾಗೆ ಮತ್ತೆ ನೀವೆ ಸುದ್ದಿಗೋಷ್ಠಿ ನಡೆಸಿ ಕ್ಷಮೆ ಕೇಳಬೇಕು ಎಂದು ಗಟ್ಟಿ ಸಮಾಜದ ಯುವಕರು ಆಗ್ರಹಿಸಿದ್ದಾರೆ.ಈ ನಿಟ್ಟಿನಲ್ಲಿ ಇದುವರೆಗೂ ಸದಾಶಿವ ಉಳ್ಳಾಲ ಉತ್ತರ ನೀಡದೆ ಸುಮ್ಮನಿದ್ದು,ಇದೀಗ ಮುಂದೆ ಏನು‌ ಮಾಡಬೇಕೆಂದು ತೀರ್ಮಾನಿಸುವ ನಿಟ್ಟಿನಲ್ಲಿ ನಾಳೆ ಬೆಳಗ್ಗೆ ಗಟ್ಟಿ ಸಮಾಜದ ಬಾಂಧವರು ತುರ್ತು ಸಭೆ ಕರೆದಿದ್ದಾರೆ.
ಈ ಸಭೆಯಲ್ಲಿ ಏನು ನಿರ್ಧಾರ ಆಗುತ್ತೆ ಅಂತ ಕಾದುನೋಡಬೇಕಾಗಿದೆ.

 

Exit mobile version