main logo

ಶ್ರೀಹರಿಕೋಟ: ಚಂದ್ರಯಾನಕ್ಕೆ ಕ್ಷಣಗಣನೆ, ಲೈವ್‌ ವೀಕ್ಷಣೆಗೆ ಇಲ್ಲಿ ಕ್ಲಿಕ್‌ ಮಾಡಿ

ಶ್ರೀಹರಿಕೋಟ: ಚಂದ್ರಯಾನಕ್ಕೆ ಕ್ಷಣಗಣನೆ, ಲೈವ್‌ ವೀಕ್ಷಣೆಗೆ ಇಲ್ಲಿ ಕ್ಲಿಕ್‌ ಮಾಡಿ

ಶ್ರೀಹರಿಕೋಟ: ಇಸ್ರೊ ವಿಜ್ಞಾನಿಗಳು ಇದೀಗ ಭಾರತದ ಚಂದ್ರಯಾನ-3 ಉಡಾವಣೆಗೆ ಸಜ್ಜಾಗಿದ್ದಾರೆ. ಅದರ ಉಡಾವಣೆಗೆ ಇಂದು ಕ್ಷಣಗಣನೆ ಆರಂಭವಾಗಿದ್ದು, ಭಾರತೀಯ ಕಾಲಮಾನ ಇಂದು ಮಧ್ಯಾಹ್ನ 2.35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನವಾಗಲಿದೆ. ಇಸ್ರೊದ 6 ವಾರಗಳ ಕಾರ್ಯಾಚರಣೆ ಇಂದು ಆರಂಭವಾಗುತ್ತಿದೆ.

ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ನ್ನು ಹೊಂದಿದ್ದು, ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ಭಾರವನ್ನು ಹೊಂದಿದೆ. ಚಂದ್ರಯಾನ-3 ಉಪಗ್ರಹವನ್ನು ಎಲ್ ವಿಎಂ3 ರಾಕೆಟ್ ಇಂದು ಮಧ್ಯಾಹ್ನ 2.35ಕ್ಕೆ ಹೊತ್ತೊಯ್ಯಲಿದೆ. ಅದಕ್ಕೆ ಅಂತಿಮ ಕ್ಷಣದ ಪೂರ್ವಸಿದ್ಧತೆಗಳು ಸರಾಗವಾಗಿ ಸಾಗುತ್ತಿದೆ ಎಂದು ಇಸ್ರೊ ತಿಳಿಸಿದೆ.

ವೀಕ್ಷಣೆಗೆ ಇಸ್ರೋ ಮುಖ್ಯಸ್ಥರ ಮನವಿ: ಇಸ್ರೋ ಮುಖ್ಯಸ್ಥರು ಇಡೀ ರಾಷ್ಟ್ರದ ಜನತೆಗೆ ಚಂದ್ರಯಾನ-3 ರ ನೇರ ಉಡಾವಣೆಯನ್ನು ವೀಕ್ಷಿಸಲು ಒತ್ತಾಯಿಸಿದ್ದಾರೆ. ಇಸ್ರೋದ ಅಧಿಕೃತ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿರುವ ಲೈವ್ ಸ್ಟ್ರೀಮಿಂಗ್ ಮೂಲಕ ಆಸಕ್ತರು ಉಡಾವಣೆಯ ರೋಚಕ ಕ್ಷಣವನ್ನು ಅನುಭವಿಸಬಹುದು.

Related Articles

Leave a Reply

Your email address will not be published. Required fields are marked *

error: Content is protected !!