main logo

ಶ್ರೀದೇವಿಯ ಸಾವಿನ ಬಗ್ಗೆ ಸತ್ಯ ಬಚ್ಚಿಟ್ಟ ಪತಿ ಬೋನಿ ಕಪೂರ್

ಶ್ರೀದೇವಿಯ ಸಾವಿನ ಬಗ್ಗೆ ಸತ್ಯ ಬಚ್ಚಿಟ್ಟ ಪತಿ ಬೋನಿ ಕಪೂರ್

ಮುಂಬೈ: ಸಿನಿಮಾ ರಂಗದಲ್ಲಿ ನಟಿಯಾಗಿ ಅಭಿನಯಿಸಿ ತನ್ನದೇ ಫ್ಯಾನ್ ಫಾಲೋವರ್ಸ್ ಹೊಂದಿದ್ದ ನಟಿ ಶ್ರೀದೇವಿ 2018 ರ ಫೆಬ್ರವರಿಯಲ್ಲಿ ಹೋಟೆಲ್‌ವೊಂದರ ಬಾತ್‌ಟಬ್‌ನಲ್ಲಿ ಬಿದ್ದು ನಿಧನರಾಗಿದ್ದರು.

ಈ ಬಗ್ಗೆ ಈಗ ಪತಿ ಬೋನಿ ಕಪೂರ್ ಮೌನ ಮುರಿದಿದ್ದಾರೆ. ಇತ್ತಿಚೇಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಾನು ಚೆನ್ನಾಗಿ ಕಾಣಬೇಕೆಂಬ ವ್ಯಾಮೋಹದಿಂದ ಶ್ರೀದೇವಿ ಅವರು ಬಹಳ ಕಟ್ಟುನಿಟ್ಟಾದ ಡಯೆಟ್‌ ಮಾಡುತ್ತಿದ್ದರು, ಇದರಿಂದ ಹಲವು ದುಷ್ಪರಿಣಾಮಗಳು ಅವರಿಗೆ ಎದುರಾಗಿದ್ದವು. ಶ್ರೀದೇವಿ ಮೃತಪಟ್ಟಾಗ ಸುಮಾರು ಒಂದೆರಡು ದಿನಗಳ ನನ್ನನ್ನು ತನಿಖೆಗೆ ಒಳಪಡಿಸಿದ್ದರು. ಭಾರತೀಯ ಮಾಧ್ಯಮದವರ ಒತ್ತಡವಿದ್ದುದರಿಂದ ಈ ರೀತಿ ಮಾಡಬೇಕಾಯಿತು ಎಂದು ತನಿಖಾಧಿಕಾರಿಗಳು ಹೇಳಿದ್ದರು. ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ವಿವಿಧ ತನಿಖೆಯನ್ನು ನಾನು ಎದುರಿಸಿದ್ದೆ, ವರದಿಯಲ್ಲಿ ಇದೊಂದು ಆಕಸ್ಮಿಕ ಸಾವು ಎಂದು ಸ್ಪಷ್ಟವಾಯಿತು. ಅವಳಿಗೆ ಲೋ ಬಿಪಿ ಸಮಸ್ಯೆ ಇದೆ ಎಂದು ವೈದ್ಯರು ಎಚ್ಚರಿಸುತ್ತಲೇ ಇದ್ದರು. ಚಿತ್ರೀಕರಣದ ವೇಳೆ ಶ್ರೀದೇವಿ ಬಾತ್‌ರೂಮ್‌ನಲ್ಲಿ ಮೂರ್ಛೆ ಬಿದ್ದು, ಹಲ್ಲು ಕೂಡಾ ಮುರಿದಿದ್ದಳು ಎಂದು ಬೋನಿ ಕಪೂರ್‌ ಪ್ರತಿಕ್ರಿಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!