Site icon newsroomkannada.com

ಎಕ್ಕೂರಿನ ನಮೋ ವೇದಿಕೆಯಲ್ಲಿ ಜನ್ಮಾಷ್ಟಮಿ ಪ್ರಯುಕ್ತ ‘ಗ್ರಾಮೀಣ ಕ್ರೀಡೋತ್ಸವ’ ಸಂಪನ್ನ

ಮಂಗಳೂರು: ಕಂಕನಾಡಿ ಪಕ್ಕಲಡ್ಕ – ಬಜಾಲ್ ಸಾರ್ವಜನಿಕ ಮೊಸರು ಕುಡಿಕೆ ಸಮಿತಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗ್ರಾಮೀಣ ಕ್ರೀಡೋತ್ಸವ ಎಕ್ಕೂರಿನ ನಮೋ ವೇದಿಕೆ ಮೈದಾನದಲ್ಲಿ ನಡೆಯಿತು.

ಗ್ರಾಮೀಣ ಕ್ರೀಡೋತ್ಸವದ ಮುಖ್ಯ ಅತಿಥಿಗಳಾಗಿ ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ವಕೀಲರು ಹಾಗೂ ಪರಂಜೋತಿ ಭಜನಾ ಮಂದಿರ ಇದರ ಅಧ್ಯಕ್ಷ ದಿನಕರ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ಅಧೀಕ್ಷಕ ಹರೀಶ್ ಕುಮಾರ್ ಕುಡ್ತಡ್ಕ, ಉದ್ಯಮಿ ಗಣೇಶ್ ಪಂಡಿತ್, ನಿತಿನ್ ಅತ್ತಾವರ, ಲೋಹಿತ್ ರೈ, ಹವಮಾನ ಇಲಾಖೆಯ ನಿವೃತ್ತ ಅಧಿಕಾರಿ  ನಾಗೇಶ್ ಪ್ರಗತಿನಗರ, ಕಿರಣ್ ರೈ, ಸಹಾಯಕ ಪೊಲೀಸ್ ನಿರೀಕ್ಷಕರಾದ ಸಂತೋಷ್ ಪಡೀಲ್,  ಚಂದ್ರಕುಮಾರ್, ಬಾಬು ಪೂಜಾರಿ, ಸಂತೋಷ್ ಆಳ್ವ, ರಮೇಶ್ ಎಂ ಹಾಗೂ ತುಳು ಚಲನಚಿತ್ರ ನಟರಾದ ಸತೀಶ್ ಬಂದಲೆ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಮೊಸರು ಕುಡಿಕೆ ಸಮಿತಿಯ ಗೌರವಾಧ್ಯಕ್ಷ ಬಿ ರಾಮಚಂದ್ರ ಆಳ್ವ, ಅಧ್ಯಕ್ಷ ಭರತ್ ರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಎಕ್ಕೂರು, ಕ್ರೀಡಾ ಸಮಿತಿ ಕಾರ್ಯದರ್ಶಿ ಹೇಮಾ ಪ್ರಕಾಶ್ ಹೆಗ್ಡೆ, ಸತ್ಯನಾರಾಯಣ ಭಜನಾ ಮಂದಿರದ ಅಧ್ಯಕ್ಷ ಜಯ.ಕೆ. ಬಜಾಲ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ, ಬಜಾಲು ಜಪ್ಪಿನಮೊಗರು ಕಂಕನಾಡಿ, ಅಳಪೆ ಗ್ರಾಮದ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕಿರಣ್ ಬಜಾಲ್   ಸ್ವಾಗತಿಸಿದರು, ಮಾಧವ ಶೆಣೈ ಹಾಗೂ ಶರತ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version