ಬೇಕಾದ ಸಾಮಗ್ರಿಗಳು: ಕಲ್ಲಂಗಡಿ -1, ಸಕ್ಕರೆ- 1/2ಕಪ್ , ಹಾಲು- 1 ಗ್ಲಾಸ್, ಏಲಕ್ಕಿ ಹುಡಿ- 1 ಚಮಚ, ಕಾಮಕಸ್ತೂರಿ ಬೀಜ- 3 ಚಮಚ
ಮಾಡುವ ವಿಧಾನ: ಕಲ್ಲಂಗಡಿಯನ್ನು ತುಂಡು ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ ಇದಕ್ಕೆ ಅರ್ಧ ಕಪ್ ನಷ್ಟು ಸಕ್ಕರೆ, ಒಂದು ಲೋಟದಷ್ಟು ಹಾಲು ಅರ್ಧ ಚಮಚ ಏಲಕ್ಕಿ ಹುಡಿಯನ್ನು ಹಾಕಿ ಗ್ರೈಂಡ್ ಮಾಡಿಕೊಳ್ಳಿ. ರೆಡಿಯಾದ ಜ್ಯೂಸನ್ನು ಪಾತ್ರೆಗೆ ಹಾಕಿಕೊಂಡು ಅದಕ್ಕೆ ನೀರಿಗೆ ಹಾಕಿಕೊಂಡಿರುವಂತಹ ಕಾಮಕಸ್ತೂರಿ ಬೀಜವನ್ನು ಕೂಡ ಹಾಕಿಕೊಳ್ಳಿ ನಂತರ ಇದಕ್ಕೆ ಐಸ್ ಕ್ಯೂಬನ್ನ ಹಾಕಿ ಮಿಕ್ಸ್ ಕೊಡಿ ಈಗ ತಂಪಾಗಿರುವಂತಹ ಕಲ್ಲಂಗಡಿ ಜ್ಯೂಸ್ ಕುಡಿಯಲು ಸಿದ್ದ.