main logo

ಸೌಜನ್ಯ ಪ್ರಕರಣ ಮರು ತನಿಖೆ ಆಗ್ರಹಿಸಿ ಒಕ್ಕಲಿಗರ ಸಂಘದಿಂದ ಸಿಎಂಗೆ ಮನವಿ ನೀಡಲು ನಿರ್ಧಾರ

ಸೌಜನ್ಯ ಪ್ರಕರಣ ಮರು ತನಿಖೆ ಆಗ್ರಹಿಸಿ ಒಕ್ಕಲಿಗರ ಸಂಘದಿಂದ ಸಿಎಂಗೆ ಮನವಿ ನೀಡಲು ನಿರ್ಧಾರ

ಬೆಳ್ತಂಗಡಿ: ಉಜಿರೆ ಕಾಲೇಜಿನ ವಿದ್ಯಾರ್ಥಿನಿ  ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಮಂಗಳವಾರ (ಜು.25) ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಎಚ್‌. ಪದ್ಮಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಉಜಿರೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರಕ್ಕೀಡಾಗಿ ಹೀನಾಯ ರೀತಿಯಲ್ಲಿ 2012ರ ಅ.9ರಂದು ಕೊಲೆಯಾಗಿದ್ದಳು. ಈ ಕೃತ್ಯಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುತ್ತದೆ. ಈ ವಿಚಾರವಾಗಿ ಹಲವಾರು ಪ್ರತಿಭಟನೆಗಳು, ಆರೋಪಗಳು ಕಂಡುಬಂದಿದ್ದು ಮುಂದಿನ ತನಿಖೆಗಳನ್ನು ಅಂದಿನ ರಾಜ್ಯ ಸರ್ಕಾರ ರಾಜ್ಯದ ಸಂಬಂಧಪಟ್ಟ ಇಲಾಖೆಗಳಿಂದ ತನಿಖೆ ನಡೆಸಲು ಆದೇಶಿಸಿದ್ದು, ಆದರೆ ಈ ಬಗ್ಗೆ ಕುಟುಂಬ ವರ್ಗ ಹಾಗೂ ಅಕ್ರೋಶಗಳು ಪ್ರತಿಭಟನೆಗಳು ಮುಂದುವರಿದಿದ್ದ ಪರಿಣಾಮ 2013ರಲ್ಲಿ ರಾಜ್ಯ ಸರ್ಕಾರ ಸಿಬಿಐ ತನಿಖೆ ನಡೆಸುವಂತೆ ಕೇಳಿಕೊಂಡ ಮೇರೆಗೆ ಸಿಬಿಐ ಅಧಿಕಾರಿಗಳು ಬೆಳ್ತಂಗಡಿಗೆ ಆಗಮಿಸಿ ತನಿಖೆ ನಡೆಸಿ ಸಂತೋಷರಾವ್ ಎಂಬಾತನನ್ನು ಆರೋಪಿಯನ್ನಾಗಿಸಿ, ಬೆಂಗಳೂರಿನ ಸಿಬಿಐ ನ್ಯಾಯಾಲಯದಲ್ಲಿ ಪ್ರಕರಣದ ಬಗ್ಗೆ ದೋಷರೋಪಣ ಪಟ್ಟಿ ಸಲ್ಲಿಸಿರುತ್ತದೆ. ಬಳಿಕ ಸಿಬಿಐ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿ ಸಂತೋಷರಾವ್‌ನನ್ನು ಇತ್ತೀಚೆಗೆ ದೋಷಮುಕ್ತಗೊಳಿಸಿ ಬಿಡುಗಡೆ ಮಾಡಲಾಗಿರುತ್ತದೆ. ಆದರೆ ಪ್ರಕರಣದ ನೈಜ ಅಪರಾಧಿಗಳನ್ನು ಪತ್ತೆ ಹಚ್ಚಿ ಕಾನೂನಡಿ ಶಿಕ್ಷಿಸುವಲ್ಲಿ ನಮ್ಮ ನಮ್ಮ ವ್ಯವಸ್ಥೆ ವಿಫಲವಾಗಿದೆ. ಈ ಬಗ್ಗೆ ಸೌಜನ್ಯ ಹೆತ್ತವರು ಹಾಗೂ ಕುಟುಂಬವರ್ಗ ಹಾಗೂ ನಮ್ಮ ಸಮಾಜ ಬಂಧುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು: ಈ ನಿಟ್ಟಿನಲ್ಲಿ ಸಮಾಜದ ಭಾವನೆಗಳಿಗೆ ಸ್ಪಂದಿಸುವುದು. ನಮ್ಮ ಸಂಘದ ಜವಾಬ್ದಾರಿ ಹಾಗೂ ಕರ್ತವ್ಯವಿರುವುದರಿಂದ ಅಪರಾಧಿಗಳನ್ನು ಕಾನೂನಿನ ಅಡಿಯಲ್ಲಿ ನೀಡಲು ಕಾನೂನಿನ ವ್ಯವಸ್ಥೆಯಲ್ಲಿ ವಿಫಲವಾಗಿದೆ ಎಂಬುವುದು ನಮ್ಮೆಲ್ಲರ ಅಭಿಪ್ರಾಯವಾಗಿದೆ. ಬೆಳ್ತಂಗಡಿ ತಾಲೂಕಿನ ನಮ್ಮ ಎಲ್ಲಾ ಸಮಾಜದ ಬಂಧುಗಳ ಪರವಾಗಿ ಸದ್ರಿ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ಮರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಹೀನಾಯ ರೀತಿಯಿಂದ ಜೀವ ಕಳೆದುಕೊಂಡಿರುವ ಆತ್ಮಕ್ಕೆ, ಹೆತ್ತವರಿಗೆ ಹಾಗೂ ಕುಟುಂಬ ವರ್ಗಕ್ಕೆ ನ್ಯಾಯವನ್ನು ಕೊಡಿಸುವುದರೊಂದಿಗೆ ಸಜ್ಜನ ಸಮಾಜಕ್ಕೆ ನ್ಯಾಯಯುತ ಸಂದೇಶ ಒದಗಿಸಬೇಕಾಗಿ ಈ ಮೂಲಕ ಸಂಬಂಧಪಟ್ಟವರನ್ನು ಮನವಿ ಮಾಡುತ್ತಿದ್ದೇವೆ ಎಂದು ಪದ್ಮ ಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ ಕೃಷ್ಣಪ್ಪ ಗೌಡ ಸವಣಾಲು, ಸಂ. ಕಾರ್ಯದರ್ಶಿ ಟಿ. ಜಯಾನಂದ ಗೌಡ ಪ್ರಜ್ವಲ್, ನಿರ್ದೇಶಕರಾದ ಧರ್ಣಪ್ಪ ಗೌಡ ಬಂದಾರು, ವಿಜಯ್ ಕುಮಾರ್ ನ್ಯಾಯತರ್ಪು, ಭವಾನಿ ಕೆ. ಗೌಡ ಮೂಡಾಯೂರು, ಗೋಪಾಲಕೃಷ್ಣ ಗೌಡ ಗುಲ್ಲೋಡಿ, ಯುವರಾಜ್ ಅನಾರ್ ಕರಾಯ, ಹರೀಶ್ ಗೌಡ ಪರಪ್ಪಾಜೆ, ಉಷಾ ದೇವಿ, ಗಣೇಶ್‌ ಗೌಡ, ಜತೆಕಾರ್ಯದರ್ಶಿ ಕೆ.ಎಂ. ಶ್ರೀನಾಥ್ ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

error: Content is protected !!