26ರ ಹರೆಯಕ್ಕೆ ಕೊನೆಯುಸಿರೆಳೆದ ವಯಸ್ಕ ಚಿತ್ರ ತಾರೆ ಸೋಫಿಯಾ ಲಿಯೋನ್
Team Newsroom
[ನ್ಯೂಯಾರ್ಕ್: 26 ವರ್ಷದ ವಯಸ್ಕ ಚಿತ್ರ ತಾರೆ ಸೋಫಿಯಾ ಲಿಯೋನ್ ಅವರು ಮೃತಪಟ್ಟಿದ್ದಾರೆ. ಅವರು ಈ ತಿಂಗಳ ಆರಂಭದಲ್ಲಿ ತನ್ನ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಆಕೆಯ ಮಲತಂದೆ ಮೈಕ್ ರೊಮೆರೊ ಶನಿವಾರ ತಿಳಿಸಿದ್ದಾರೆ.
ಮಾರ್ಚ್ 1 ರಂದು ಯುಎಸ್ ನಲ್ಲಿನ ತನ್ನ ಅಪಾರ್ಟ್ ಮೆಂಟ್ ನಲ್ಲಿ ಸೋಫಿಯಾಳನ್ನು ಆಕೆಯ ಕುಟುಂಬವು ಪ್ರತಿಕ್ರಿಯಿಸದ ರೀತಿಯಲ್ಲಿ ಪತ್ತೆ ಮಾಡಿದೆ.
ಅವಳ ತಾಯಿ ಮತ್ತು ಕುಟುಂಬದ ಪರವಾಗಿ, ನಮ್ಮ ಪ್ರೀತಿಯ ಸೋಫಿಯಾ ಅವರ ನಿಧನದ ಸುದ್ದಿಯನ್ನು ನಾನು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತೇನೆ” ಎಂದು ರೊಮೆರೊ ಹೇಳಿದರು.
ಆಕೆಯ ಸಾವಿನ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಕೆಯ ಮಾಡೆಲ್ ಏಜೆನ್ಸಿಯಾದ 101 ಮಾಡೆಲಿಂಗ್ ಕೂಡಾ ಆಕೆಯ ಸಾವಿನ ವಿಚಾರವನ್ನು ಖಚಿತಪಡಿಸಿದೆ.