ಬಿಹಾರ: ಬಿಹಾರದ ಜಮುಯಿಯಲ್ಲಿ ಅಳಿಯನೇ ಅತ್ತೆ ಜೊತೆ ಚಕ್ಕಂದ ಆಡುತ್ತಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಗೂ ಮುನ್ನ ಈತ ತನ್ನ ಅತ್ತೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ. ಅಲ್ಲಿ ಅವನು ತನ್ನ ಸೋದರ ಸಂಬಂಧಿಯ ವಿಧವೆ ಅತ್ತೆಯೊಂದಿಗೆ ಪ್ರೀತಿ ಯಲ್ಲಿ ಸಿಲುಕಿದ್ದಾನೆ. ನಂತರ ಇಬ್ಬರೂ ರಹಸ್ಯವಾಗಿ ಭೇಟಿಯಾಗಲು ಪ್ರಾರಂಭಿಸಿದ್ದಾರೆ.
ಅಳಿಯ ಮತ್ತು ಅತ್ತೆ ಪರಸ್ಪರ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಆಗಾಗ ರಹಸ್ಯವಾಗಿ ಭೇಟಿಯಾಗುತ್ತಿದ್ದರು.ರಾತ್ರಿ ಭೇಟಿ ಮಾಡುವಾಗ ಸಿಕ್ಕಿಬಿದ್ದ ಅತ್ತೆ-ಅಳಿಯ, ಗ್ರಾಮಸ್ಥರು ಥಳಿಸಿದ್ದಾರೆ. ಅಳಿಯ ರಾತ್ರಿಯಲ್ಲಿ ತನ್ನ ಅತ್ತೆಯನ್ನು ಭೇಟಿಯಾಗಲು ಹೋಗಿದ್ದು, ಇಬ್ಬರೂ ಮೈ ಮರೆತು ಚಕ್ಕಂದವಾಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರು ಅಳಿಯನನ್ನು ತೀವ್ರವಾಗಿ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಕಾ ಜಿಲ್ಲೆಯ ಧೋರೈಯಾ ಗ್ರಾಮದ ನಿವಾಸಿ ಚಂದನ್ ಗೋಸ್ವಾಮಿ ಅವರ ಅತ್ತಿಗೆ ಹನ್ಸ್ದಿಹ್ ಗ್ರಾಮದಲ್ಲಿದ್ದಾರೆ. ಅವರ ಸೋದರ ಸಂಬಂಧಿ ವಿಧವೆ ಅತ್ತೆ ಕೂಡ ಅಲ್ಲಿ ವಾಸಿಸುತ್ತಿದ್ದಾರೆ. ಅತ್ತೆಯ ಮನೆಗೆ ಹೋಗುವಾಗ ಚಂದನ್‌ಗೆ ಆಕೆಯ ಮೇಲೆ ಪ್ರೀತಿಯಾಗಿದೆ. ಇಲ್ಲಿಂದ ಇಬ್ಬರ ನಡುವೆ ಲವ್ ಸ್ಟೋರಿ ಶುರುವಾಗಿದೆ.