ಉಡುಪಿ: ತಾಯಿಯ ಪಿಂಡ ಪ್ರದಾನಕ್ಕೆ ತೆರಳಿದ್ದ ಮಗ ಕೆರೆಗೆ ಬಿದ್ದು ಮೃತಪಟ್ಟ ಘಟನೆ ದಾರುಣ ಘಟನೆ ವರದಿಯಾಗಿದೆ. ಉಡುಪಿ ಜಿಲ್ಲೆಯ ಕೋಟದಲ್ಲಿ ಈ ದುರ್ಘಟನೆ ನಡೆದಿದ್ದು ಗಣೇಶ್ ಅಧಿಕಾರಿ (76) ಮೃತರು ಎಂದು ತಿಳಿದು ಬಂದಿದೆ.
ಏನಿದು ಘಟನೆ ?
ಗಣೇಶ್ ಅಧಿಕಾರಿಯವರು ತನ್ನ ತಾಯಿಯ ಶ್ರಾದ್ಧ ಕಾರ್ಯ ಮುಗಿಸಿ, ಸಂಪ್ರದಾಯದಂತೆ ಸಂಜೆ 5.30ಕ್ಕೆ ಪಿಂಡ ಪ್ರದಾನ ಮಾಡಲು ಮನೆ ಬಳಿಯ ಕೆರೆಗೆ ಹೋಗಿದ್ದರು ಎನ್ನಲಾಗಿದೆ.ಅರ್ಧ ಗಂಟೆಯಾದರೂ ಯಾಕೆ ಮನೆಗೆ ಬರಲಿಲ್ಲವೆಂದು ಮತ್ತೋರ್ವ ಮಗ ಹೋಗಿ ನೋಡಿದಾಗ ಅವರ ಶವವು ಕೆರೆಯಲ್ಲಿ ತೇಲುತಿತ್ತು ಎಂದು ತಿಳಿದು ಬಂದಿದೆ.ಅವರು ಪಿಂಡ ಹಾಕಲು ಹೋದಾಗ, ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಮುಳುಗಿ ಉಸಿರು ಕಟ್ಟಿ ಮೃತಪಟ್ಟಿದ್ದಾರೆ ಎಂದು ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ