Site icon newsroomkannada.com

ಬಿಜೆಪಿ ವಶಕ್ಕೆ ಸೋಮೇಶ್ವರ ಪುರಸಭೆ

ಸೋಮೇಶ್ವರ

ಉಳ್ಳಾಲ: ಸೊಮೇಶ್ವರ ಗ್ರಾಮ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಪ್ರಥಮ ಚುನಾವಣೆಯಲ್ಲಿ ಬಿಜೆಪಿಯ16 ಅಭ್ಯರ್ಥಿಗಳು ಜಯಗಳಿಸುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಚೊಚ್ಚಲ ಪುರಸಭೆಯ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದು, ಕಾಂಗ್ರೆಸ್ 07 ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಪುರಸಭೆಯ ಎಲ್ಲಾ 23 ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿಜೆಪಿಯ 16 ಅಭ್ಯರ್ಥಿಗಳು ಜಯಗಳಿಸಿದ್ದು, 22 ಸ್ಥಾನಗಳಲ್ಲಿ ಸ್ಪರ್ಧೆ ನಡೆಸಿದ್ದ ಕಾಂಗ್ರೆಸ್ 07 ಸ್ಥಾನವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಬೆಂಬಲದಿಂದ ಸ್ಪರ್ಧಿಸಿದ್ದ 3ನೇ ಪ್ರಕಾಶ್ ನಗರ ವಾರ್ಡ್ ನಲ್ಲಿ ಸಿಪಿಐಎಂ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿಯ ಎದುರು ಸೋಲನ್ನನುಭವಿಸಿದ್ದಾರೆ.

Exit mobile version