main logo

104 ವರ್ಷದ ಅಜ್ಜಿಯಿಂದ ಸ್ಕೈ ಡೈವ್: ‘ ವಿಡಿಯೋ ನೋಡಿ

104 ವರ್ಷದ ಅಜ್ಜಿಯಿಂದ ಸ್ಕೈ ಡೈವ್: ‘ ವಿಡಿಯೋ ನೋಡಿ

ಚಿಕಾಗೊ: ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ವಯಸ್ಸು ಅಡ್ಡಿಯಾಗದು ಎಂಬ ಮಾತಿದೆ. ಅದೇ ರೀತಿ ಅಮೆರಿಕದ ಚಿಕಾಗೋದ ಡೊರೊಥಿ ಹಾಫ್ನರ್(104) ವರ್ಷದ ವೃದ್ಧೆಯೊಬ್ಬರು ಅಕ್ಟೋಬರ್ 1 ರಂದು ಚಿಕಾಗೋದಿಂದ ನೈಋತ್ಯಕ್ಕೆ 140 ಕಿಲೋಮೀಟರ್ ದೂರದಲ್ಲಿರುವ ಒಟ್ಟಾವಾದಲ್ಲಿ 13,500 ಅಡಿ ಎತ್ತರದಲ್ಲಿ ಸ್ಕೈ ಡೈವ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಈ ವಯಸ್ಸಲ್ಲಿ ಸ್ಕೈ ಡೈವಿಂಗ್ ಮಾಡೋದು ಮಾಮೂಲಿ ವಿಷಯ ಅಲ್ಲ ಅಜ್ಜಿ.. ಸೂಪರ್’ ಎಂದು ಒಬ್ಬರು ಕಮೆಂಟ್ ಹಾಕಿದ್ದರೆ, ಮತ್ತೊಬ್ಬರು ‘ಥ್ಯಾಂಕ್ಯೂ ಅಜ್ಜಿ, ಯುವ ಪೀಳಿಗೆಗೆ ಸ್ಫೂರ್ತಿ ತುಂಬಿದ್ದಕ್ಕೆ’ ಎಂದು ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ನೆಟ್ಟಿಗರು ‘ವಾವ್.. ಸೂಪರ್, ಎಂದು ಕಮೆಂಟ್ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!