ಆಗ್ರಾ: ವಿವಾಹ ಸಮಾರಂಭದಲ್ಲಿ ರಸಗುಲ್ಲಾ ವಿಚಾರಕ್ಕೆ ಎರಡು ಕಡೆಯವರ ನಡುವೆ ಘರ್ಷಣೆ ಸಂಭವಿಸಿ, ಮಹಿಳೆ ಸೇರಿದಂತೆ ಆರು ಮಂದಿ ಗಾಯಗೊಂಡ ಘಟನೆ (ನವೆಂಬರ್ 20) ರಂದು ತಡರಾತ್ರಿ
ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಶಂಸಾಬಾದ್ ಪಟ್ಟಣದ ನಯಾಬನ್ಸ್ ರಸ್ತೆಯಲ್ಲಿರುವ ಸಂತೋಷಿ ಮಾತಾ ದೇವಸ್ಥಾನದ ಬಳಿ ವಿವಾಹ ಸಮಾರಂಭದಲ್ಲಿ ಔತಣಕೂಟ ನಡೆಯುತ್ತಿದ್ದು, ಈ ವೇಳೆ ರಸಗುಲ್ಲಾ ತಿನ್ನುವ ವಿಚಾರವಾಗಿ ಎರಡು ಕಡೆಯವರ ನಡುವೆ ವಾಗ್ವಾದ ನಡೆದು ಅದು ಘರ್ಷಣೆಗೆ ತಿರುಗಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಅನಿಲ್ ಶರ್ಮಾ ತಿಳಿಸಿದ್ದಾರೆ.
ಪೊಲೀಸರು ಎಲ್ಲಾ ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.