Site icon newsroomkannada.com

‘ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮʼ; ಸತ್ಯ ಒಪ್ಪಿಕೊಂಡ ಕಂಪನಿ

ನವದೆಹಲಿ: ಕೊರೊನಾ ಸಮಯದಲ್ಲಿ ಭಾರೀ ಸುದ್ದಿಯಲ್ಲಿದ್ದ ಔಷಧಿಗಳ ತಯಾರಿಕಾ ಸಂಸ್ಥೆ Oxford-AstraZeneca, ಆಘಾತಕಾರಿ ಮಾಹಿತಿ ಒಂದನ್ನು ಕೊನೆಗೂ ಕೋರ್ಟ್​ ಮುಂದೆ ಒಪ್ಪಿಕೊಂಡಿದೆ. ತಾನು ಅಭವೃದ್ಧಿಪಡಿಸಿ ಕೋಟ್ಯಾಂತರ ಜನರಿಗೆ ನೀಡಿರುವ ಕೊರೊನಾ ಲಸಿಕೆಯು ಗಂಭೀರ ಅಡ್ಡಪರಿಣಾಮ ಉಂಟುಮಾಡಬಹುದು ಎಂದು ಮೊದಲ ಬಾರಿಗೆ ಹೇಳಿದೆ.

ಕೋವಿಶೀಲ್ಡ್, ವ್ಯಾಕ್ಸ್​​ಝೇವ್ರಿಯಾ ಬ್ರಾಂಡ್​​ ಹೆಸರಲ್ಲಿ ಕೊರೊನಾ ಲಸಿಕೆಯನ್ನು ಪ್ರಪಂಚದಾದ್ಯಂತ ಅಸ್ಟ್ರಾಝೆನೆಕಾ ಮಾರಾಟ ಮಾಡಿತ್ತು. ಈ ಲಸಿಕೆಯಿಂದ ಟಿಟಿಎಸ್ ನಂತಹ ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಆದರೆ ಇದು ತುಂಬಾನೇ ಅಪರೂಪ ಎಂದು ಲಂಡನ್ ಕೋರ್ಟ್​ ಮುಂದೆ ಕಂಪನಿ ಹೇಳಿದೆ.

ಟಿಟಿಎಸ್​ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. ಜೊತೆಗೆ ಪ್ಲೇಟ್‌ಲೆಟ್ಸ್​ ದಿನದಿಂದ ದಿನಕ್ಕೆ ಕುಸಿಯಲು ಆರಂಭಿಸುತ್ತದೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಸ್ಟ್ರೋಕ್ ಅಥವಾ ಹೃದಯ ಸ್ತಂಭನದ ಸಾಧ್ಯತೆಗಳು ಹೆಚ್ಚಾಗುತ್ತದೆ.

ಈ ವರ್ಷದ ಫೆಬ್ರವರಿಯಲ್ಲಿ UK ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ಈ ವೇಳೆ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ AstraZeneca ಒಪ್ಪಿಕೊಂಡಿದೆ. ಆದರೆ ಕಂಪನಿಯು ಲಸಿಕೆ ಪರವಾಗಿ ತನ್ನ ವಾದಗಳನ್ನು ಮಂಡಿಸಿದೆ.

Exit mobile version