ನವದೆಹಲಿ: ಕೊರೊನಾ ಸಮಯದಲ್ಲಿ ಭಾರೀ ಸುದ್ದಿಯಲ್ಲಿದ್ದ ಔಷಧಿಗಳ ತಯಾರಿಕಾ ಸಂಸ್ಥೆ Oxford-AstraZeneca, ಆಘಾತಕಾರಿ ಮಾಹಿತಿ ಒಂದನ್ನು ಕೊನೆಗೂ ಕೋರ್ಟ್ ಮುಂದೆ ಒಪ್ಪಿಕೊಂಡಿದೆ. ತಾನು ಅಭವೃದ್ಧಿಪಡಿಸಿ ಕೋಟ್ಯಾಂತರ ಜನರಿಗೆ ನೀಡಿರುವ ಕೊರೊನಾ ಲಸಿಕೆಯು ಗಂಭೀರ ಅಡ್ಡಪರಿಣಾಮ ಉಂಟುಮಾಡಬಹುದು ಎಂದು ಮೊದಲ ಬಾರಿಗೆ ಹೇಳಿದೆ.
ಕೋವಿಶೀಲ್ಡ್, ವ್ಯಾಕ್ಸ್ಝೇವ್ರಿಯಾ ಬ್ರಾಂಡ್ ಹೆಸರಲ್ಲಿ ಕೊರೊನಾ ಲಸಿಕೆಯನ್ನು ಪ್ರಪಂಚದಾದ್ಯಂತ ಅಸ್ಟ್ರಾಝೆನೆಕಾ ಮಾರಾಟ ಮಾಡಿತ್ತು. ಈ ಲಸಿಕೆಯಿಂದ ಟಿಟಿಎಸ್ ನಂತಹ ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಆದರೆ ಇದು ತುಂಬಾನೇ ಅಪರೂಪ ಎಂದು ಲಂಡನ್ ಕೋರ್ಟ್ ಮುಂದೆ ಕಂಪನಿ ಹೇಳಿದೆ.
ಟಿಟಿಎಸ್ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. ಜೊತೆಗೆ ಪ್ಲೇಟ್‌ಲೆಟ್ಸ್ ದಿನದಿಂದ ದಿನಕ್ಕೆ ಕುಸಿಯಲು ಆರಂಭಿಸುತ್ತದೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಸ್ಟ್ರೋಕ್ ಅಥವಾ ಹೃದಯ ಸ್ತಂಭನದ ಸಾಧ್ಯತೆಗಳು ಹೆಚ್ಚಾಗುತ್ತದೆ.
ಈ ವರ್ಷದ ಫೆಬ್ರವರಿಯಲ್ಲಿ UK ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ಈ ವೇಳೆ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ AstraZeneca ಒಪ್ಪಿಕೊಂಡಿದೆ. ಆದರೆ ಕಂಪನಿಯು ಲಸಿಕೆ ಪರವಾಗಿ ತನ್ನ ವಾದಗಳನ್ನು ಮಂಡಿಸಿದೆ.