Site icon newsroomkannada.com

ಸಂವಿಧಾನ ಒಪ್ಪದ ಬಿಜೆಪಿಯಿಂದ ಚುನಾವಣೆಗಾಗಿ ಅಂಬೇಡ್ಕರ್‌ ಹೊಗಳಿಕೆ: ಸಿದ್ದರಾಮಯ್ಯ

Siddaramaiah invokes Ambedkar in call to defeat BJP-RSS in 2024 LS elections

ಬೆಂಗಳೂರು: ಬಿಜೆಪಿಯು ಜನರಿಗೆ ಧರ್ಮ, ಕೋಮು ಎಂಬ ವಿಷ ಬೀಜ ಬಿತ್ತಿ ತತ್ವ ವಿಚಾರಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸಂವಿಧಾನವನ್ನು ವಿರೋಧಿಸುವ ಬಿಜೆಪಿ ಚುನಾವಣೆಗಾಗಿ ಅಂಬೇಡ್ಕರ್‌ ಪ್ರತಿಮೆಯನ್ನು ಬಳಸಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದರು.

ರಾಜ್ಯದ ದಲಿತ ಸಂಘಟನೆಗಳ ವತಿಯಿಂದ ಇಲ್ಲಿನ ಟೌನ್ ಹಾಲ್ ನಲ್ಲಿ ನಡೆದ ‘ಭೀಮ ಸಂಕಲ್ಪ’ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಆರ್ ಎಸ್ ಎಸ್ ನ್ನು ಸೋಲಿಸುವಂತೆ ದಲಿತ ಸಂಘಟನೆಗಳಿಗೆ ಕರೆ ನೀಡಿದರು.

ಸಮಾಜವು ಜಾತಿಗಳ ಆಧಾರದ ಮೇಲೆ ಪ್ರಗತಿ ಹೊಂದಲು ಸಾಧ್ಯವಿಲ್ಲ, ಸಾಂವಿಧಾನಿಕ ಮೌಲ್ಯಗಳು ಸಾಮಾಜಿಕ ಮತ್ತು ಆರ್ಥಿಕ ಅವಕಾಶಗಳನ್ನು ಒದಗಿಸಬೇಕು ಎಂಬುದು ಅಂಬೇಡ್ಕರ್‌ ಚಿಂತನೆ ಎಂದರು. ಸಂವಿಧಾನ ಬದಲಿಸಲು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಅಂದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಗಲಿ, ಪ್ರಧಾನಿ ನರೇಂದ್ರ ಮೋದಿಯಾಗಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಆದರೆ, ನಾವು ಮತ್ತು ನೀವು ಸಂವಿಧಾನ ಬದಲಾಯಿಸಲು ಬಂದವರನ್ನು ಬದಲಾಯಿಸಿದ್ದೇವೆ ಎಂದು ಹೇಳಿದ ಅವರು 2024 ರಲ್ಲೂ ಅದೇ ಪುನರಾವರ್ತನೆಯಾಗಲಿ ಎಂದು ಕರೆ ನೀಡಿದರು.

ಐಕ್ಯ ಹೋರಾಟ ಸಮಿತಿ ಸಲ್ಲಿಸಿದ 13 ಬೇಡಿಕೆಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಈಗಾಗಲೇ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದ್ದು, ಉಳಿದವುಗಳನ್ನೂ ಈಡೇರಿಸುವುದಾಗಿ ಭರವಸೆ ನೀಡಿದರು.

Exit mobile version