Site icon newsroomkannada.com

ಮಲ್ಪೆ: ಮೀನು ಪ್ರೀಯರಿಗೆ ಶಾಕಿಂಗ್ ಸುದ್ದಿ; ಇಲ್ಲಿ ಮೀನು ತಿಂದರೆ ಕ್ಯಾನ್ಸರ್ ಬರಬಹುದು ಎಚ್ಚರಿಕೆ

ವೀಕೆಂಡ್ ಗಳಲ್ಲಿ ಸುತ್ತಾಟ ಈಗ ಸಾಮಾನ್ಯ ಆಗಿ ಬಿಟ್ಟಿದೆ. ಇದೀಗ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರು, ಶಾಲಾ ಮಕ್ಕಳು ಕೃಷ್ಣನಗರಿ ಉಡುಪಿಗೆ ಆಗಮಿಸುತ್ತಿದ್ದಾರೆ. ಹೀಗೆ ಆಗಮಿಸುವವರ ನೆಚ್ಚಿನ ತಾಣ ಅಂದ್ರೆ ಮಲ್ಪೆ ಬೀಚ್​.. ಇಲ್ಲಿ ಬರುವ ಬಹುತೇಕರು ನಾನ್ ವೆಜ್ ಪ್ರಿಯರು, ಅದರಲ್ಲೂ ಮೀನಂದ್ರೆ ಭಾರೀ ಇಷ್ಟ ಪಟ್ಟು ತಿನ್ನುತ್ತಾರೆ.ಇಂತಹ ಸ್ಥಳಗಳಲ್ಲಿ ವ್ಯಾಪಾರಸ್ಥರು ಲಾಭದ ಲೆಕ್ಕಾಚಾರದಲ್ಲಿ ಬೀಚ್ ಬಳಿಯೇ ಫಿಶ್ ಲ್ಯಾಂಡ್, ಮೀನ್ ಲಂಚ್ ರೀತಿ ನಾನಾ ನಾನ್ ವೆಜ್​ ಆಹಾರ ಮಳಿಗೆಗಳನ್ನ ಹಾಕಿದ್ದಾರೆ. ಇಲ್ಲಿ ಪ್ರವಾಸಿಗರನ್ನು ಸೆಳೆಯಲೆಂದೇ ಕಣ್ಣು ಕುಕ್ಕುವಂತೆ ಮೀನಿಗೆ ಕಡುಕೆಂಪು ಬಣ್ಣದ ಮಸಾಲೆ ಹಚ್ಚಿ ಹೊರಗೆ ಸಾಲಾಗಿ ಇಡಲಾಗಿದೆ.‌ ಆದ್ರೆ ಹೀಗೆ ಮಸಾಲೆ ಹಚ್ಚಿ ಇಡಲಾದ ಮೀನು‌ಗಳನ್ನು ಬಾಯಿ ಚಪ್ಪರಿಸಿ ತಿಂದ್ರೆ ಕ್ಯಾನ್ಸರ್ ಬರಬಹುದು ಎಚ್ಚರ. ಯಾಕಂದ್ರೆ ಅದರಲ್ಲಿರುವ ರಾಸಾಯನಿಕ ಹಾಗೂ ಮಿತಿ ಮೀರಿದ ಟೇಸ್ಟಿಂಗ್ ಪೌಡರ್ ಹಾಕಿ ರೆಡಿ ಮಾಡಿ ಇಡುತ್ತಾರೆ.

ಇದರ ಜೊತೆಗೆ ಚಿಕನ್ ಕಬಾಬ್, ಗೋಬಿ ಮಂಚೂರಿ, ಫಿಂಗರ್ ಚಿಪ್ಸ್ ಹೀಗೆ ಕರಿದ ಆಹಾರ ತಿನಿಸು ಸಖತ್ ಡೇಂಜರ್ ಅನ್ನೋದು ಕನ್ ಫರ್ಮ್ ಆಗಿದೆ. ದೂರಿನ ಮೇರೆಗೆ ಬೀಚ್ ಸಮೀಪ‌ ಇರುವ ಸುಮಾರು 28 ಆಹಾರ ಮಳಿಗೆಗಳ ಮೇಲೆ ದಾಳಿ ಮಾಡಿ ನಗರಸಭೆ ಪೌರಾಯುಕ್ತ ರಾಯಪ್ಪ ಹಾಗೂ ಅಧಿಕಾರಿಗಳ ತಂಡ ತಪಾಸಣೆ ನಡೆಸಿದೆ. ಈ ಸಂದರ್ಭದಲ್ಲಿ ಬರೋಬ್ಬರಿ 6.5 ಕೆಜಿ ಟೇಸ್ಟಿಂಗ್ ಪೌಡರ್ ಸಿಕ್ಕಿದೆ. ಅಷ್ಟೇ ಅಲ್ಲ ರಾಸಾಯನಿಕ ಬಣ್ಣಗಳು ಪತ್ತೆಯಾಗಿವೆ. ಈ ಪ್ರಮಾಣದ ಟೇಸ್ಟಿಂಗ್ ಪೌಡರ್ ಕಂಡು ಪೌರಾಯುಕ್ತರೇ ಶಾಕ್ ಆಗಿದ್ದಾರೆ.

ಹೆಚ್ಚಿನ ಪ್ರಮಾಣದ ರಾಸಾಯನಿಕ, ಟೇಸ್ಟಿಂಗ್ ಪೌಡರ್ ಬಳಸಿ ಪ್ರವಾಸಿಗರ ಪ್ರಾಣದ ಜೊತೆ ವ್ಯಾಪಾರಸ್ಥರು ಆಟವಾಡುತ್ತಿದ್ದಾರೆ. ಇಂತ ವ್ಯಾಪಾರಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬದಲು ಬುದ್ಧಿವಾದ ಹೇಳಿದ್ರೆ ಯಾವ ಬದಲಾವಣೆ ಸಾಧ್ಯ. ಮತ್ತೆ ಕದ್ದು ಮುಚ್ಚಿ ಅದೇ ಟೇಸ್ಟಿಂಗ್ ಪೌಡರ್ ಬಳಸಲ್ಲ ಅನ್ನೋದು ಏನು ಗ್ಯಾರಂಟಿ ಅಂತ ಸಾರ್ವಜನಿಕರು ಪ್ರಶ್ನಿಸ್ತಿದ್ದಾರೆ.

Photo Credit –  Twitter

Exit mobile version