Site icon newsroomkannada.com

ನಟ ಶಾರುಖ್ ಖಾನ್​ಗೆ ಜೀವ ಬೆದರಿಕೆ: Y+ ಭದ್ರತೆ ಒದಗಿಸಿದ ಮಹಾರಾಷ್ಟ್ರ ಸರಕಾರ

ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಬರತೊಡಗಿದ್ದು ಇದೀಗ ಮಹಾರಾಷ್ಟ್ರ ಸರಕಾರ ನಟನ ಭದ್ರತೆಯನ್ನು Y+ ಗೆ ಹೆಚ್ಚಿಸಿದೆ ಎಂದು ಮಾಹಿತಿ ಲಭಿಸಿದೆ.

ಹಿಟ್ ಚಿತ್ರಗಳಾದ ಪಠಾಣ್ ಹಾಗೂ ಜವಾನ್ ಚಿತ್ರಗಳು ಭಾರಿ ಯಶಸ್ಸು ಕಂಡಿದ್ದು ಇದರ ಬೆನ್ನಲ್ಲೇ ನಟನಿಗೆ ಬೆದರಿಕೆಗಳು ಬರತೊಡಗಿದೆ ಇದರ ಹಿನ್ನೆಲೆಯಲ್ಲಿ ಉನ್ನತ ಸಮಿತಿಯು ಶಾರುಖ್ ಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ದೇಶಾದ್ಯಂತ ನಟನಿಗೆ ಈ ಭಧ್ರತೆ ಅನ್ವಯಿಸುತ್ತದೆ. ಈ ಬಾಡಿಗಾರ್ಡ್ಸ್​ ಬಳಿ ಎಂಪಿ-5 ಮೆಷಿನ್ ಗನ್​ಗಳು, ಎಕೆ47, ರೈಫಲ್ಸ್ ಹಾಗೂ ಗ್ಲಾಕ್ ಪಿಸ್ತೂಲ್​​ಗಳು ಇರಲಿವೆ. ನಟನ ಮನೆಗೂ ನಾಲ್ವರು ಸಶಸ್ತ್ರ ಪೊಲೀಸರಿಂದ ಭದ್ರತೆ ಸಿಗಲಿದೆ.ನಟ ತಮ್ಮ ಸೆಕ್ಯುರಿಟಿಗೆ ಪಾವತಿ ಮಾಡಲಿದ್ದಾರೆ.

Exit mobile version