main logo

ಲೈಂಗಿಕ ದೌರ್ಜನ್ಯ ; ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಎಫ್ಐಆರ್ ದಾಖಲು, ಮಹಿಳೆ ದೂರು ಆಧರಿಸಿ ಕೇಸು, ತಲೆಮರೆಸಿಕೊಂಡ ಪ್ರಜ್ವಲ್

ಲೈಂಗಿಕ ದೌರ್ಜನ್ಯ ; ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಎಫ್ಐಆರ್ ದಾಖಲು, ಮಹಿಳೆ ದೂರು ಆಧರಿಸಿ ಕೇಸು, ತಲೆಮರೆಸಿಕೊಂಡ ಪ್ರಜ್ವಲ್

ಹಾಸನ: ಹಾಸನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿಡಿಯೋ ವೈರಲ್ ಆದ ಘಟನೆ ಬಗ್ಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ‌ ಮೊದಲ ಎಫ್ ಐ ಆರ್ ದಾಖಲಾಗಿದೆ. ‌

 

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸಂತ್ರಸ್ತ ಮಹಿಳೆ ದೂರು ಆಧರಿಸಿ ಕೇಸ್ ದಾಖಲು ಮಾಡಲಾಗಿದೆ. ‌ಹಲವಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಬಗ್ಗೆ ಪೆನ್ ಡ್ರೈವ್ ವಿಡಿಯೋ ಹರಿದಾಡಿತ್ತು.

 

ಇದೀಗ ಸಂಸದ ಪ್ರಜ್ವಲ್ ವಿರುದ್ಧವೇ ಸಂತ್ತಸ್ತ ಮಹಿಳೆ ದೂರು ನೀಡಿದ್ದು ಪದೇ ಪದೆ ಹಿಂಬಾಲಿಸಿ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಆರೋಪಿಸಲಾಗಿದೆ. ಮಹಿಳೆಯ ಘನತೆಗೆ ಧಕ್ಕೆ ಆರೋಪ ಸೇರಿ ಐಪಿಸಿ ಸೆಕ್ಷನ್ 354A , 354 D ಹಾಗು 509 ಅಡಿ ಹೊಳೆನರಸೀಪುರ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

 

ವಿಡಿಯೋ ವೈರಲ್ ಬಗ್ಗೆ ರಾಜ್ಯ ಸರ್ಕಾರ, ಎಸ್ಐಟಿ ತನಿಖೆಗೆ ಆದೇಶ ಮಾಡುತ್ತಿದ್ದಂತೆ ಮೊದಲ ಎಫ್ಐಆರ್ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದೆ. ‌ನೂರಾರು ಮಂದಿ ಮಹಿಳೆಯರ ಜೊತೆಗಿದ್ದ ಅಶ್ಲೀಲ ವಿಡಿಯೋ ಹೊರ ಬಂದಿದೆ ಎನ್ನಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

error: Content is protected !!